Wednesday, January 22, 2025
ಸುದ್ದಿ

ಮಂಗಳೂರು: ತುರ್ತು ರಕ್ತದ ಅವಶ್ಯಕತೆಗೆ ಸ್ಪಂದಿಸಿ ಮಧ್ಯರಾತ್ರಿ ರಕ್ತ ಪೂರೈಸಿದ ಬ್ಲಡ್ ಡೋನರ್ಸ್ – ಕಹಳೆ ನ್ಯೂಸ್

ಮಂಗಳೂರು: ಕೆಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯದುನಂದನ್ ಎಂಬ ರೋಗಿಗೆ ತುರ್ತು ರಕ್ತದ ಅವಶ್ಯಕತೆ ಇದ್ದಾಗ ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆಯನ್ನು ಸಂಪರ್ಕಿಸಿದ್ದು, ರಾತ್ರಿ ಸುಮಾರು 1 ಗಂಟೆ ವೇಳೆಗೆ ರಕ್ತ ಪೂರೈಸಲಾಗಿದೆ.

ಬ್ಲಡ್ ಡೋನರ್ಸ್ ಸಂಸ್ಥೆಯ ಕಾರ್ಯದರ್ಶಿ ನವಾಝ್ ಕಲ್ಲರಕೋಡಿ ರಕ್ತದ ಅತೀವ ಅಗತ್ಯತೆಯನ್ನು ಮನಗಂಡು ತಂಡದ ಸಹ ಕಾರ್ಯನಿರ್ವಾಹಕರಾದ ಫಾರೂಕ್ ಜ್ಯೂಸ್ ರೋಮ್ಯಾಂಟಿಕ್, ರಝಾಕ್ ಸಾಲ್ಮರ ಇವರನ್ನು ಒಟ್ಟುಗೂಡಿಸಿ ಆಸ್ಪತ್ರೆಗೆ ಭೇಟಿ ನೀಡಿದರು. ವೈದ್ಯರು ರಾತ್ರಿ ಸರಿಸುಮಾರು ಒಂದು ಗಂಟೆಗೆ ಸರಿಯಾಗಿ ರೋಗಿಗೆ ಓಪನ್ ಹಾರ್ಟ್ ಶಸ್ತ್ರ ಚಿಕಿತ್ಸೆ ನಡೆಯಲಿರುವುದರ ಬಗ್ಗೆ ಮಾಹಿತಿ ನೀಡಿದರು. ಇದಕ್ಕಾಗಿ ರಕ್ತದ ತುರ್ತು ಅಗತ್ಯತೆಯನ್ನು ವಿವರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕೂಡಲೇ ಕಾರ್ಯಪ್ರವೃತ್ತರಾದ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ಸದಸ್ಯರಾದ ಇಬ್ರಾಹಿಂ ಅಮೀರ್ ಕೆ.ಸಿ ರೋಡ್, ಶಬೀರ್ ತಲಪಾಡಿ, ಹಮೀದ್ ಕಲ್ಲರಕೋಡಿ ಇವರನ್ನು ಸಂಪರ್ಕಿಸಿ ರಕ್ತದಾನ ಮಾಡುವಂತೆ ಮನವಿ ಮಾಡಲಾಯಿತು. ಮನವಿಗೆ ಒಪ್ಪಿಕೊಂಡ ಸದಸ್ಯರನ್ನು ಸ್ವತ: ತಮ್ಮದೇ ವಾಹನದಲ್ಲಿ ಕರೆದುಕೊಂಡು ಬಂದು ರಕ್ತದಾನ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ. ರಕ್ತದ ಅತೀ ಅಗತ್ಯತೆ ಕಂಡು ಬಂದ ತಕ್ಷಣ ಬ್ಲಡ್ ಡೋನರ್ಸ್ ಮಂಗಳೂರು ಇದರ ಸದಸ್ಯರು ಮಧ್ಯರಾತ್ರಿ 1 ಗಂಟೆಗೆ ಬಂದು ರಕ್ತದಾನ ಮಾಡಿ ಒಂದು ಜೀವವನ್ನು ಉಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು