Saturday, November 23, 2024
ಬಂಟ್ವಾಳ

ಪದ್ಮಶ್ರೀ ಪುರಸ್ಕೃತ ಡಾ. ಕದ್ರಿ ಗೋಪಾಲನಾಥ ಸ್ವಾರಕ ಹುಟ್ಟೂರಲ್ಲಿ ಲೋಕಾರ್ಪಣೆ-ಕಹಳೆ ನ್ಯೂಸ್

ಬಂಟ್ವಾಳ: ಖ್ಯಾತ ಸ್ಯಾಕ್ಸೋಫೋನ್ ವಾದಕ ಪದ್ಮಶ್ರೀ ಡಾ. ಕದ್ರಿ ಗೋಪಾಲನಾಥ್ ಅವರ ಹುಟ್ಟೂರು ಸಜೀಪದಲ್ಲಿ ಅವರ ಜನ್ಮದಿನವಾದ ಡಿ.6ರಂದು ಕುಟುಂಬದ ಸದಸ್ಯರು ಡಾ. ಕದ್ರಿ ಗೋಪಾಲನಾಥ್ ಅವರ ಪುಣ್ಯಭೂಮಿ ಸ್ಮಾರಕ ಲೋಕಾರ್ಪಣೆ ಮಾಡಿದರು.


ಡಾ. ಕದ್ರಿ ಗೋಪಾಲನಾಥ್ ಅವರ ಸಮಾಧಿಯನ್ನು ವಿಶೇಷವಾಗಿ ವಿನ್ಯಾಸ ಮಾಡಲಾಗಿದ್ದು, ಅಲ್ಲಿ ಸಂಗೀತ ದೇಶ, ಧರ್ಮ ಮೀರಿದ ವಿಶ್ವಭಾಷೆ, ಹೃದಯ ಭಾಷೆ ಎಂದು ಬರೆದಿದ್ದು, ಕದ್ರಿಯವರ ಪುತ್ಥಳಿಯಿದೆ. ಅಪರಾಹ್ನ 3 ಗಂಟೆಯಿಂದ ಅವರ ಶಿಷ್ಯರಾದ ಚಂದ್ರಶೇಖರನಾಥ ಕಣಂತೂರು, ಜನಾರ್ಧನ್ ವಿ.ಆರ್. ಚೆನ್ನೈ, ಶ್ರೀಧರ್ ಸಾಗರ್, ತ್ರಿಧಾತ್, ಪ್ರಕಾಶ್ ಕೊಡ್ಯಡ್ಕ, ಪ್ರೊ.ಬಾಬುನಾರಾಯಣ್, ಗಣೇಶ್ ನಾಥ ಮತ್ತು ವೆಂಕಟಾಚಲಪತಿ ಸಂಗೀತ ಕಾರ್ಯಕ್ರಮಗಳನ್ನು ನೀಡಿದರು. ಸ್ಯಾಕ್ಸೋಫೋನ್ ಜೊತೆಗೆ ಮ್ಯಾಂಡೊಲಿನ್ ವಾದನ ಮೂಲಕ ತಮ್ಮ ಗುರುಗಳನ್ನು ನೆನಪಿಸಿಕೊಂಡರು. ಕಾರ್ಯಕ್ರಮಕ್ಕೆ ಆಗಮಿಸಿದ ಮಂಗಳೂರು ಶಾಸಕ ವೇದವ್ಯಾಸ ಕಾಮತ್, ಜೋಗಿ ಸುಧಾರಕ ಸಮಾಜದ ಅಧ್ಯಕ್ಷ ಕಿರಣ್ ಜೋಗಿ, ಮತ್ತು ಪ್ರಮುಖರಾದ ಪಮ್ಮಿ ಕೊಡಿಯಾಲ್ ಬೈಲ್, ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ದೇವದಾಸ ಕಾಪಿಕಾಡ್, ಕುಟುಂಬಸ್ಥರಾದ ಸರೋಜಿನಿ ಗೋಪಾಲನಾಥ್, ಕದ್ರಿ ಮಣಿಕಾಂತ್, ಅದಿತಿ ಮಣಿಕಾಂತ್, ಅಂಬಿಕಾ, ಮೋಹನ್ ಜೋಗಿ, ಚಂದ್ರನಾಥ, ಗಣೇಶ್ ನಾಥ್ ಸಹಿತ ಶಿಷ್ಯವೃಂದ ಹಾಜರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು