Sunday, November 24, 2024
ಹೆಚ್ಚಿನ ಸುದ್ದಿ

ನಾಳೆ ಕರ್ನಾಟಕ ಬಂದ್‌ : ಭಾರತ ಬಂದ್‌ಗೆ ಪೂರಕವಾಗಿ ನಿರ್ಧಾರ – ಕಹಳೆ ನ್ಯೂಸ್

ಬೆಂಗಳೂರು : ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಮಂಗಳವಾರ ನಡೆಯಲಿರುವ ಭಾರತ ಬಂದ್‌ಗೆ ಕರ್ನಾಟಕದಲ್ಲೂ ಬೆಂಬಲ ವ್ಯಕ್ತವಾಗಿದೆ. ರಾಜ್ಯದಲ್ಲಿಯೂ ರೈತ ಸಂಘಟನೆಗಳು ಬಂದ್‌ ನಡೆಸಲಿವೆ. ದೇಶದ ಒಟ್ಟು 40 ರೈತ ಸಂಘಟನೆಗಳು ಬಂದ್‌ಗೆ ಕರೆ ನೀಡಿದ್ದು, ಕಾಂಗ್ರೆಸ್‌, ಟಿಎಂಸಿ, ಟಿಆರ್‌ಎಸ್‌, ಆಪ್‌ ಸಹಿತ 8 ವಿಪಕ್ಷಗಳು ಬೆಂಬಲ ನೀಡಿವೆ.

ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌, ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರಬೂರು ಶಾಂತಕುಮಾರ್‌, ರಾಜ್ಯ ರೈತ ಸಂಘ ಮತ್ತು ಹಸುರು ಸೇನೆಯ ಮುಖಂಡ ಬಡಗಲಪುರ ನಾಗೇಂದ್ರ ಈ ಬಗ್ಗೆ ಪ್ರತಿಕ್ರಿಯಿಸಿ, “ಕರ್ನಾಟಕ ಬಂದ್‌ಗೆ ಸಿದ್ಧತೆ ನಡೆಸಲಾಗಿದೆ’ ಎಂದಿದ್ದಾರೆ. ಬಂದ್‌ಗೆ ಕಾರ್ಮಿಕ ಸಂಘಟನೆಗಳ ಸಹಿತ ಹಲವು ಸಂಘಟನೆಗಳು ಬೆಂಬಲ ನೀಡಿವೆ. ಆಯಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ರೈತಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲೂ ಬಂದ್‌ಗೆ ಬೆಂಬಲ ವ್ಯಕ್ತವಾಗಿದ್ದು, ಕೆಲವೆಡೆ ರಾಸ್ತಾರೊಕೋ ನಡೆಸಲು ಸಂಘಟನೆಗಳು ನಿರ್ಧರಿಸಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಪಕ್ಷಗಳ ಬೆಂಬಲ
ದೇಶದ ಒಟ್ಟು 40ಕ್ಕೂ ಹೆಚ್ಚು ರೈತ ಸಂಘಟನೆಗಳು ಕರೆ ನೀಡಿರುವ ಭಾರತ ಬಂದ್‌ಗೆ ಕಾಂಗ್ರೆಸ್‌, ಟಿಆರ್‌ಎಸ್‌, ಟಿಎಂಸಿ, ಆಪ್‌, ಡಿಎಂಕೆ, ಆರ್‌ಜೆಡಿ, ಸಮಾಜವಾದಿ ಪಾರ್ಟಿ, ಎನ್‌ಸಿಪಿ ಬೆಂಬಲ ನೀಡಿವೆ. ಈ ಸಂಬಂಧ ಜಂಟಿ ಹೇಳಿಕೆ ಬಿಡುಗಡೆ ಮಾಡಿರುವ ವಿಪಕ್ಷ ನಾಯಕರಾದ ಸೋನಿಯಾ ಗಾಂಧಿ, ಶರದ್‌ ಪವಾರ್‌, ಎಂ.ಕೆ. ಸ್ಟಾಲಿನ್‌, ಅಖೀಲೇಶ್‌ ಯಾದವ್‌, ತೇಜಸ್ವಿ ಯಾದವ್‌, “ನಾವು ರೈತರ ಬೆನ್ನಿಗೆ ನಿಂತಿದ್ದೇವೆ. ಕೇಂದ್ರ ಸರಕಾರವು ರೈತ ವಿರೋಧಿ ಕಾನೂನುಗಳನ್ನು ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸುತ್ತಿದ್ದೇವೆ’ ಎಂದಿದ್ದಾರೆ. ದೇಶದ ಪ್ರಮುಖ ಕಾರ್ಮಿಕ ಸಂಘಟನೆಗಳೂ ಬಂದ್‌ಗೆ ಬೆಂಬಲ ನೀಡಿವೆ.