Monday, January 20, 2025
ಬಂಟ್ವಾಳ

ಎಬಿವಿಪಿ ಬಂಟ್ವಾಳ ನಗರದ ವತಿಯಿಂದ ಅಂಬೇಡ್ಕರ್ ಪುಣ್ಯಸ್ಮರಣೆ ಕಾರ್ಯಕ್ರಮ- ಕಹಳೆ ನ್ಯೂಸ್

ಬಂಟ್ವಾಳ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳ ನಗರದ ವತಿಯಿಂದ ಅಂಬೇಡ್ಕರ್ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಬಿ.ಸಿ ರೋಡಿನ ಶಿಶುಮಂದಿರದಲ್ಲಿ ನಡೆಸಲಾಯಿತು.


ಈ ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳ ನಗರ ಅಧ್ಯಕ್ಷ ಹಾಗೂ ಉಪನ್ಯಾಸಕ ಡಾ.ರಮಾನಂದ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅಂಬೇಡ್ಕರ್ ಜೀವನ ಮೌಲ್ಯಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು. ಮತ್ತು ಸಮಾಜದ ತೊಡಕುಗಳ ನಡುವೆ ಅದಮ್ಯ ಚೇತನವಾಗಿ ಬೆಳೆದು ಬಂದ ಸಂವಿಧಾನಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಪುಣ್ಯಸ್ಮರಣೆಯನ್ನು, ಸಾಮಾಜಿಕ ಸಾಮರಸ್ಯ ದಿನವನ್ನಾಗಿ ಆಚರಿಸುತ್ತಿರುವುದು ಹೆಮ್ಮೆಯ ವಿಚಾರ ಎಂದರು. ಈ ಸಂದರ್ಭದಲ್ಲಿ ವಿದ್ಯಾರ್ಥಿ ಪರಿಷತ್ ನ ಮಂಗಳೂರು ಜಿಲ್ಲಾ ಸಂಚಾಲಕರಾದ ಹರ್ಷಿತ್ ಕೊಯಿಲ, ತಾಲೂಕು ಸಂಚಾಲಕರಾದ ದಿನೇಶ್ ಕೊಯಿಲ, ತಾಲೂಕು ಸಹ ಸಂಚಾಲಕರಾದ ಅಖಿಲಾಶ್ , ನಗರ ಸಹಕಾರ್ಯದರ್ಶಿ ಅನೀಶ್ ಚೇಳೂರು ವೆಂಕಟೇಶ್ ನಾಯಕ್, ಗಗನ್ ,ನಿಖಿಲ್,ಶಿವಪ್ರಸಾದ್ , ರಂಜಿತ್ ,ಪ್ರಶಾಂತ್ , ಪ್ರಿತೇಶ್ ಮತ್ತಿತರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು