Recent Posts

Monday, January 20, 2025
ಹೆಚ್ಚಿನ ಸುದ್ದಿ

‘ನಟಿ ಸಂಜನಾ’ ಆರೋಗ್ಯ ತಪಾಸಣೆಗೆ ‘ಹೈಕೋರ್ಟ್’ ಆದೇಶ – ಕಹಳೆ ನ್ಯೂಸ್

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿರುವಂತ ನಟಿ ಸಂಜನಾ, ಅನಾರೋಗ್ಯದ ಹಿನ್ನಲೆಯಲ್ಲಿ ಜಾಮೀನು ನೀಡುವಂತೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿರುವಂತ ನ್ಯಾಯಪೀಠವು, ನಟಿ ಸಂಜನಾ ಆರೋಗ್ಯ ತಪಾಸಣೆ ಮಾಡಿ, ವರದಿ ಸಲ್ಲಿಸಲು ಆದೇಶಿಸಿದೆ.

ಇಂದು ನಟಿ ಸಂಜನಾ ಅನಾರೋಗ್ಯದ ಹಿನ್ನಲೆಯಲ್ಲಿ ಜಾಮೀನು ಕೋರಿ ಸಲ್ಲಿಸಲಾಗಿದ್ದಂತ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು. ಇಂತಹ ಅರ್ಜಿಯ ವಿಚಾರಣೆ ನಡಸಿದಂತ ನ್ಯಾಯಪೀಠವು, ಆಸ್ಪತ್ರೆಯಲ್ಲಿ ನಟಿ ಸಂಜನಾ ಅವರ ಆರೋಗ್ಯದ ಬಗ್ಗೆ ತಪಾಸಣೆ ನಡೆಸಿ, ನ್ಯಾಯಪೀಠಕ್ಕೆ ಅದರ ವರದಿ ಸಲ್ಲಿಸುವಂತೆ ಆದೇಶಿದೆ. ಹೀಗಾಗಿ ನಟಿ ಸಂಜನಾ ಜಾಮೀನು, ಇದೀಗ ಆರೋಗ್ಯ ತಪಾಸಣೆಯ ಮೇಲೆ ನಿಂತಿದೆ. ನಿಜಕ್ಕೂ ಅವರಿಗೆ ಅನಾರೋಗ್ಯ ಇರುವುದಾದರೇ ಹೈಕೋರ್ಟ್ ನ್ಯಾಯಪೀಠವು ಜಾಮೀನು ಮಂಜೂರು ಮಾಡಬಹುದು. ಇಲ್ಲವೇ ಸುಳ್ಳು ಎಂದಾದರೇ ಮತ್ತೆ ಜೈಲೇ ಗತಿಯೆನ್ನುವಂತಾಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು