Sunday, November 24, 2024
ಪುತ್ತೂರು

ಪುತ್ತೂರು ಶ್ರೀ ರಾಮಜನ್ಮ ತೀರ್ಥ ಕ್ಷೇತ್ರ ಟಸ್ಟ್ ನ ಅಯೋಧ್ಯೆ ಶ್ರೀ ರಾಮ ಮಂದಿರದ ನಿಧಿ ಸಮರ್ಪಣಾ ಅಭಿಯಾನ ಕಾರ್ಯಕ್ರಮ- ಕಹಳೆ ನ್ಯೂಸ್

ಪುತ್ತೂರು: ಅಯೋಧ್ಯೆಯ ಶ್ರೀ ರಾಮ ಜನ್ಮ ತೀರ್ಥ ಕ್ಷೇತ್ರ ಟ್ರಸ್ಟ್ ನ ನೇತೃತ್ವದಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ಶ್ರೀ ರಾಮಮಂದಿರಕ್ಕೆ ಎಲ್ಲಾ ಹಿಂದುಗಳ ಸಹಭಾಗಿತ್ವ ಇರಬೇಕೆನ್ನುವ ನಿಟ್ಟಿನಲ್ಲಿ ನಿಧಿ ಸಂಗ್ರಹಕ್ಕೆ ಮುಂದಿನ ಜನವರಿ 15  ಮಕರಸಂಕ್ರಾಂತಿಯಿಂದ ಫೆಬ್ರವರಿ 27 ಮಾಘ ಹುಣ್ಣುಮೆವರೆಗೆ 45 ದಿನಗಳ ಕಾಲ ನಿಧಿ ಸಮರ್ಪಣಾ ಅಭಿಯಾನವು ಇಡೀ ದೇಶಾದ್ಯಂತ ನಡೆಯಲಿರುವ ಹಿನ್ನೆಲೆಯಲ್ಲಿ ಪುತ್ತೂರು ಜಿಲ್ಲಾ ಕಾರ್ಯಾಲಯದ ಉದ್ಘಾಟನೆ ಕಾರ್ಯಕ್ರಮವು  ಡಿ.7 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರದೇವದತ್ತ ಸಂಸ್ಥಾನದ ಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ,    ಅವರು ದೀಪಬೆಳಗಿಸಿ ವೇದಿಕೆಯಲ್ಲಿ ಮಾತನಾಡಿದರು.  ಮತ್ತು  ಬಜರಂಗದಳ ದಕ್ಷಿಣ ಪ್ರಾಂತ ಸಹಸಂಯೋಜಕರು ಮತ್ತು ನಿಧಿ ಸಮರ್ಪಣಾ ಸಮಿತಿ ಪುತ್ತೂರು ಜಿಲ್ಲಾ ಸಂಚಾಲಕ ಮುರಳಿಕೃಷ್ಣ ಹಸಂತಡ್ಕ,  ಅವರು ಸ್ವಾಗತಿಸಿ, ಪ್ರಸ್ತವಣೆಗೈದರು.ಈ ವೇಳೆಯಲ್ಲಿ ಗುರುದೇವಾನಂದ ಸ್ವಾಮೀಜಿ ಅವರಿಗೆ ಫಲಾ ಸಮಾರ್ಪಣೆ ಮಾಡಲಾಯಿತು.ಹಾಗೆಯೇ ಈ ಕಾರ್ಯಕ್ರಮದಲ್ಲಿ ,ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಲ್ಲಡ್ಕ ಡಾ. ಪ್ರಭಾಕರ ಭಟ್,, ಮಂಗಳೂರು ವಿಭಾಗದ ಸಹಸೇವಾ ಪ್ರಮುಖ್ ಸುಭಾಶ್ ಕಲೆಂಜ , ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪುತ್ತೂರು ಗ್ರಾಮಾಂತರ ತಾಲೂಕಿನ ಸಂಘ ಪ್ರಮುಖ್ ಸುಧಾಕರ ರೈ, ಸೇರಿದಂತೆ ವಿವಿಧ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಪಿ.ಜೆ ಜಗನ್ನಿವಾಸ ರಾವ್, ವಿಶ್ವಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಅಧ್ಯಕ್ಷ ಡಾ.ಕೃಷ್ಣಪ್ರಸನ್ನ, ಪ್ರಧಾನ ಕಾರ್ಯದರ್ಶಿ ಸತೀಶ್ ಬಿ.ಎಸ್, ನಗರ ಸಭೆ ಅಧ್ಯಕ್ಷ ಜೀವಂಧರ್ ಜೈನ್, ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ ಸೇರಿದಂತೆ ಇನ್ನೂ ಹಲವಾರು ಮಂದಿ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು