ಪುತ್ತೂರು: ಕರಾವಳಿಯ ಪ್ರತಿಷ್ಠಿತ ಮನೆತನ ಬೆಳ್ಳಿಪ್ಪಾಡಿ ಟ್ರಸ್ಟ್ ನ ನೂತನ ಆಡಳಿತ ಮಂಡಳಿಯನ್ನು ರಚಿಸಲಾಯಿತು.
ಹಾಗೆಯೇ ಹಲವಾರು ವರ್ಷಗಳ ಇತಿಹಾಸ ಉಳ್ಳ ಬೆಳ್ಳಿಪ್ಪಾಡಿ ಮನೆತನ ಅತಿ ದೊಡ್ಡ ಕುಟುಂಬಸ್ಥರನ್ನು ಹೊಂದಿದ್ದು ದೇಶ-ವಿದೇಶಗಳಲ್ಲಿ ಕೀರ್ತಿ ತಂದ ಅನೇಕ ಸದಸ್ಯರು ಈ ಕುಟುಂಬದಲ್ಲಿರುವುದು ವಿಶೇಷವಾಗಿದೆ.ಮತ್ತು
ದಕ್ಷಿಣ ಭಾರತದ ಖ್ಯಾತ ನಟಿ ಪುತ್ತೂರಿನ ಚೆಲುವೆ ಅನುಷ್ಕ ಶೆಟ್ಟಿ ಇದೇ ಮನೆತನದವರಾಗಿದ್ದಾರೆ . ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿ ಮನೆಯಲ್ಲಿ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ರಘುನಾಥ ರೈ ಸೊರ್ಕ , ಉಪಾಧ್ಯಕ್ಷರಾಗಿ ಬಿ. ಗುಣರಂಜನ್ ಶೆಟ್ಟಿ. ಹಿಂದಿನ ಟ್ರಸ್ಟ್ ನ ಆಡಳಿತ ಮಂಡಳಿಯವರು ಸ್ವಯಂ ಪ್ರೇರಿತವಾಗಿ ರಾಜೀನಾಮೆಯನ್ನು ಸಲ್ಲಿಸಿದ ಕಾರಣ ಹೊಸ ಆಡಳಿತ ಮಂಡಳಿಯನ್ನು ಸರ್ವನುಮತದಿಂದ ರಚಿಸಲಾಯಿತು. ಮತ್ತು ಟ್ರಸ್ಟಿನ ಗೌರವಧ್ಯಕ್ಷರಾಗಿ ಬಿ. ರಮಾನಾಥ್ ರೈ ಹಾಗೂ ಶ್ರೀಮತಿ ಆರ್. ಆಳ್ವ. ಟ್ರಸ್ಟಿನ ಅಧ್ಯಕ್ಷರಾಗಿ ರಘುನಾಥ ರೈ ಸೊರ್ಕ, ಟ್ರಸ್ಟಿನ ಪ್ರಧಾನ ಕಾರ್ಯದರ್ಶಿಯಾಗಿ ಬಿ. ನರೇಂದ್ರ ರೈ, ಟ್ರಸ್ಟಿನ ಕೋಶಾಧಿಕಾರಿಯಾಗಿ ಬಿ. ಗೋಪಾಲಕೃಷ್ಣ ರೈ ಅತ್ರಬೈಲು, ಟ್ರಸ್ಟಿನ ಉಪಾಧ್ಯಕ್ಷರಾಗಿ ಬಿ. ಗುಣರಂಜನ್ ಶೆಟ್ಟಿ ಹಾಗೂ ಟಿ. ಚೆನ್ನಾವೇಣಿ ಎಂ. ಶೆಟ್ಟಿ, ಬಿ. ಸುಶಾಂತ್ ರೈ, ಬಿ. ಹರಿಪ್ರಸಾದ್ ರೈ, ಅಮಿತಾ ಬಿ. ಭಂಡಾರಿ ಒಟ್ಟು 5 ಜನರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಿ. ಟ್ರಸ್ಟಿನ ಜೊತೆ ಕಾರ್ಯದರ್ಶಿಯಾಗಿ ಸತೀಶ್ ರೈ ಅರಿಯಡ್ಕ ಅವರನ್ನು ಆಯ್ಕೆ ಮಾಡಲಾಯಿತು.
ಹಾಗೆಯೇ ಕಮಿಟಿಯ ಸದಸ್ಯರಾಗಿ ಬಿ. ಶಿವಪ್ರಸಾದ್ ಆಳ್ವ ಕೊಡಂಟಿ, ಬಿ. ವಿಜಯ ರೈ ಕೊಡಂಟಿ,ಬಿ. ಬಾಲಚಂದ್ರ ರೈ ಬೆದ್ರಮಾರು, ಬಿ. ಸುರೇಶ ಭಂಡಾರಿ ಅರ್ಬಿ, ಬಿ. ದಯಾ ವಿ. ರೈ, ಬಿ.ಕಾರ್ತಿಕ್ ರೈ, ಬಿ. ಯಸ್ ಸಂಕಪ್ಪ ರೈ, ಬಿ. ಪ್ರಣವತಿ ರೈ, ಬಿ. ಸುಧೀರ್ ಶೆಟ್ಟಿ ಬಳ್ಳಮಂಜ, ಬಿ. ಇಂದಿರಾ ಶೆಟ್ಟಿ ಸಕಲೇಶಪುರ, ಬಿ. ಪ್ರಪುಲ್ಲ ವಿ. ಶೆಟ್ಟಿ, ಬಿ. ನವೀನ್ ರೈ, ಡಾ. ಬಿ. ಶ್ಯಾಮ್ ಪ್ರಸಾದ್ ಶೆಟ್ಟಿ, ಬಿ. ಅಮರನಾಥ ರೈ, ಗೀತಾ ಎಸ್ ರೈ, ಸಂಧ್ಯಾ ಸಚಿನ್ ಕುಮಾರ್ ರೈ, ಡಾ. ಸುಮಂತ್ ಶೆಟ್ಟಿ, ಬಿ. ಬಾಲಕೃಷ್ಣ ರೈ ಕೈಪ, ಬಿ. ಚೇತನ್ ರೈ, ನವೀನ ಎಸ್ ಶೆಟ್ಟಿ, ಬಿ. ಪ್ರಸಾದ್ ಕೌಶಲ್ ಶೆಟ್ಟಿ, ಬಿ. ಕೃಷ್ಣ ಪ್ರಸಾದ್ ಆಳ್ವ ,ಇವರುಗಳನ್ನು ಆಯ್ಕೆ ಮಾಡಲಾಯಿತು. ಚೇತನ್ ಕುಮಾರ್ ರೈ ಮಾಣಿ ಕಾರ್ಯಕ್ರಮವನ್ನು ನಿರೂಪಿಸಿ ಗೋಪಾಲಕೃಷ್ಣ ಅತ್ರಬೈಲ್ ಸ್ವಾಗತಿಸಿದರು.