ಮೂಡುಬಿದಿರೆಯಲ್ಲಿ ಲೋಕಾರ್ಪಣೆಗೊಂಡ ಶ್ರೀ ಸತ್ಯಸಾರಮಾನಿ ಯುವಸೇನೆ ಕೇಂದ್ರ ಸಮಿತಿ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನ ಆಚರಣೆ- ಕಹಳೆ ನ್ಯೂಸ್
ಮೂಡುಬಿದಿರೆ: ಸಮುದಾಯದಲ್ಲಿ ಹಲವು ಪ್ರತಿಭೆಗಳಿವೆ ಅವರನ್ನು ಗುರುತಿಸಿ ಪ್ರೊತ್ಸಾಹಿಸುವಂತ ಕಾರ್ಯವನ್ನು ಶ್ರೀ ಸತ್ಯಸಾರಮನಿ ಯುವಸೇನೆ ಮಾಡಬೇಕು. ನಾವು, ಪ್ರತಿಪ್ಠೆ, ನಾಯಕತ್ವಕ್ಕಾಗಿ ಕೆಲಸ ಮಾಡದೆ ಸಮುದಾಯದ ಅಭಿವೃದ್ಧಿಗಾಗಿ ಯುವಸೇನೆಯ ಜೊತೆ ಕೈ ಜೋಡಿಸಬೇಕು ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕøತ ಚಲನಚಿತ್ರ ನಟ ಮೋಹನ್ ಶೇಣಿ ಅವರು ಹೇಳಿದ್ದಾರೆ.
ನಿನ್ನೆ ಮೂಡಬಿದಿರೆಯ ಸ್ವರ್ಣ ಮಂದಿರದಲ್ಲಿ ನಡೆದ ಭಾರತರತ್ನ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನ ಮತ್ತು ಶ್ರೀ ಸತ್ಯಸಾರಮಾನಿ ಯುವಸೇನೆ , ಕೇಂದ್ರ ಸಮಿತಿ ಮೂಡುಬಿದಿರೆ ಇದರ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಇವರು, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ನಮಗೆ ಶಿಕ್ಷಣ, ಸಂಘಟನೆ ಹೋರಾಟದ ಮನೋಭಾವಕ್ಕೆ ಮಾರ್ಗದರ್ಶನವನ್ನು ನೀಡಿ ಹೋಗಿದ್ದಾರೆ, ಅವರ ಮಾರ್ಗದರ್ಶನದಂತೆ ನಾವು ನಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಪತ್ರಕರ್ತೆ ಯೋಗಿನಿ ಮಚ್ಚಿನ ಇವರು ಕುಲದೈವ ಕಾನದ ಕಟದರು ಮತ್ತು ಅವರ ಆದರ್ಶಗಳು ಎಂಬ ವಿಷಯದ ಬಗ್ಗೆ ಮಾತನಾಡಿದ್ರು. ಜೊತೆಗೆ ಆಲದಪದವು ಅಕ್ಷರ ಭಾರತಿ ಇಂಗ್ಲೀಷ್ ಮೀಡಿಯಂ ಸ್ಕೂಲ್‍ನ ಶಿಕ್ಷಕ ಸುಕೇಶ್.ಕೆ ಅವರು ಅಂಬೇಡ್ಕರ್ ಅವರ ಜೀವನ ಮತ್ತು ಸಂದೇಶ ಎಂಬ ವಿಚಾರದ ಕುರಿತಾಗಿ ಮಾತನಾಡಿ, ‘ಅಂಬೇಡ್ಕರ್ ಅವರು ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತ ಅಲ್ಲ, ನಾವು ಅವರ ಅಭಿಮಾನಿಯಾಗದೆ ಅನುಯಾಯಿಗಳಾಗಬೇಕು’ ಎಂದರು.
ಸುರೇಶ್ ಪಿ.ಬಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರಂಗನಟ ಶಿವದೂತೆ ಗುಳಿಗೆ ಖ್ಯಾತಿಯ ವಿನೋದ್ ರಾಜ್ ಕೋಕಿಲ, ಬೆಳ್ತಂಗಡಿ ಯುವ ಸಂಕಿರಣದ ಅಧ್ಯಕ್ಷ ಲಕ್ಷ್ಮಣ್ ಜಿ.ಎಸ್, ನ್ಯಾಯವಾದಿ ಪ್ರಮೀಳಾ, ಶ್ರೀ ಸತ್ಯಸಾರಮಾನಿ ಯುವಸೇನೆಯ ಪ್ರಧಾನ ಕಾರ್ಯದರ್ಶಿ ಉದಯ ಗೋಳಿಯಂಗಡಿ, ಖಜಾಂಚಿ ರಾಜೇಶ್ ನೆತ್ತೋಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.