ವಿಟ್ಲ: ಕೇಪು ಶ್ರೀ ಉಳ್ಳಾಲ್ತಿ ದೇವರ ವಾರ್ಷಿಕ ಕಜಂಬು ಜಾತ್ರೋತ್ಸವ ಡಿ.16ರಂದು ನಡೆಯಲಿದೆ,
ಪ್ರಾರಂಭದ ಪ್ರಕ್ರಿಯೆ ‘ಆಗಿನೆ ಆಪುನೆ’ ಅಂದರೆ ಆಜ್ಞೆ ಆಗುವುದು ವಿಟ್ಲ ಅರಮನೆಯಲ್ಲಿ ಪರಂಪರಾಗತ ಕ್ರಿಯಾವಿಧಿಗಳೊಂದಿಗೆ ಭಾನುವಾರ ನಡೆದಿದೆ. ಹಾಗೆಯೇ ಡೊಂಬ ಹೆಗ್ಗಡೆ ಅರಸು ಮನೆತನದ ದಿ.ರವಿವರ್ಮ ನರಸಿಂಹ ರಾಜರ ಪುತ್ರ ಮತ್ತು ಸ್ವೀಕೃತ ಉತ್ತರಾಧಿಕಾರಿ ದಿ.ಆದಿತ್ಯ ವರ್ಮ ರಾಜರ ಪುತ್ರ ಬಂಗಾರು ಅರಸರು ಅನುವಂಶಿಕ ಮೊಕ್ತೇಸರರಾಗಿ ವಿಧಿ ವಿಧಾನಗಳನ್ನು ನೆರವೇರಿಸಿದರು. ಮತ್ತು ದಿ. ರಾಮವರ್ಮ ರಾಜರ ಮಗ ಸದಾಶಿವ, ಕೇಪು ಉಳ್ಳಾಲ್ತಿ ದೇವರ ಅರ್ಚಕ ಪುರುಷೋತ್ತಮ ಕೇಕುಣ್ಣಾಯ ಹಾಗೂ ಅರಮನೆಯ ಸದಸ್ಯರು, ಗಣ್ಯರು ಉಪಸ್ಥಿತರಿದ್ದರು.