ಶ್ರೀ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್, ಅಳಿಕೆ ನೂತನ ವಿದ್ಯಾರ್ಥಿ ನಿಲಯದ ಉದ್ಘಾಟನಾ ಸಮಾರಂಭ, ಡಾ. ಪ್ರಭಾಕರ ಭಟ್ ಕಲ್ಲಡ್ಕ-ಕಹಳೆ ನ್ಯೂಸ್
ವಿಟ್ಲ: ಶಿಕ್ಷಣ ಕ್ಷೇತ್ರ ವ್ಯಕ್ತಿ ನಿರ್ಮಾಣ ಮಾಡುವ ಕ್ಷೇತ್ರ. ಜೀವನ ಮೌಲ್ಯ ಕಲಿಸುವ ಸಂಸ್ಥೆಗಳು ಬೆಳೆಯಲು ಯಾವ ಅಡ್ಡಿ ಆತಂಕಗಳು ನಡೆಯಬಾರದು.
ಉತ್ತಮ ಶಿಕ್ಷಣ ಸಿಕ್ಕಾಗ ವ್ಯಕ್ತಿ ಎತ್ತರಕ್ಕೆ ಏರಲು ಸಾಧ್ಯ ಎಂದು ಪುತ್ತೂರು ಶ್ರೀ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ಸೋಮವಾರ ಸತ್ಯಸಾಯಿ ವಿಹಾರದಲ್ಲಿ ಅಳಿಕೆ ಶ್ರೀ ಸತ್ಯ ಸಾಯಿ ಲೋಕ ಸೇವಾ ಸಂಸ್ಥೆಯ ವತಿಯಿಂದ ನಿರ್ಮಾಣವಾದ ನೂತನ ವಿದ್ಯಾರ್ಥಿ ನಿಲಯದ ಉದ್ಘಾಟನೆ ನಡೆಸಿ ಮಾತನಾಡಿದರು.
ಶ್ರೇಷ್ಠ ಸಂಸ್ಕತಿ ಯನ್ನು ಜಗತ್ತಿಗೆ ಸಾರಿದ ಭಾರತದ ಜನರು ವಿದೇಶಿ ಸಂಸ್ಕತಿಯತ್ತ ಮುಖಮಾಡುತ್ತಿರುವುದು ದುರಂತ. ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತರುವ ಕಾರ್ಯ ಮಾಡಲಾಗುತ್ತಿದೆ. ಶಿಕ್ಷಣದ ಮೂಲಕ ಜೀವನ ಪಾಠ ಹೇಳುವ ಕಾರ್ಯವಾಗಬೇಕು ಎಂದು ಹೇಳಿದರು.
ಭಾರತೀಯ ನೌಕಾದಳದಲ್ಲಿ ಸಬ್ ಲೆಫ್ಟಿನೆಟ್ ಆಗಿರುವ ನಂದನ ಕೃಷ್ಣ ಅವರನ್ನು ಸನ್ಮಾನಿಸಲಾಯಿತು. ಹಾಗೆಯೇ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಕೆ. ಎಸ್. ಕೃಷ್ಣ ಭಟ್ ವಹಿಸಿದ್ದರು.
ಸಾಯಿ ಪ್ರಾರ್ಥನಾ ಪ್ರಾರ್ಥಿಸಿದರು. ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್ ಕಾರ್ಯದರ್ಶಿ ಚಂದ್ರಶೇಖರ ಭಟ್ ಎಸ್. ಸ್ವಾಗತಿಸಿದರು. ಟ್ರಸ್ಟ್ ಆಡಳಿತಾಧಿಕಾರಿ ಜನಾರ್ಧನ ನಾಯಕ್ ಎಸ್. ವಂದಿಸಿದರು. ವಿದ್ಯಾಕೇಂದ್ರ ಪ್ರಾಂಶುಪಾಲ ಶಿವಕುಮಾರ್ ಎಂ. ಕಾರ್ಯಕ್ರಮ ನಿರೂಪಿಸಿದರು.
ಈ ಕಾರ್ಯಕ್ರಮದಲ್ಲಿ ಭಾರತೀಯ ನೌಕಾದಳದಲ್ಲಿ ಸಬ್ ಲೆಫ್ಟಿನೆಟ್ ಆಗಿರುವ ನಂದನ ಕೃಷ್ಣ ಅವರನ್ನು ಸನ್ಮಾನಿಸಲಾಯಿತು. ಪುತ್ತೂರು ಶ್ರೀ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಕೆ. ಎಸ್. ಕೃಷ್ಣ ಭಟ್, ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್ ಕಾರ್ಯದರ್ಶಿ ಚಂದ್ರಶೇಖರ ಭಟ್ ಎಸ್., ಟ್ರಸ್ಟ್ ಆಡಳಿತಾಧಿಕಾರಿ ಜನಾರ್ಧನ ನಾಯಕ್ ಎಸ್. ಉಪಸ್ಥಿತರಿದ್ದರು.