Sunday, January 19, 2025
ಪುತ್ತೂರು

ಮುಳಿಯ ಜ್ಯುವೆಲ್ಸ್‍ನಲ್ಲಿ ಸಂಸ್ಥಾಪಕರ ದಿನಾಚರಣೆ ಆಚರಣೆ – ಕಹಳೆ ನ್ಯೂಸ್

ಪುತ್ತೂರು: ಇಲ್ಲಿನ ಪ್ರಸಿದ್ಧ ಚಿನ್ನದ ಮಳಿಗೆ ಮುಳಿಯ ಜ್ಯುವೆಲ್ಸ್‍ನಲ್ಲಿ ಸಂಸ್ಥಾಪಕರ ದಿನಾಚರಣೆಯನ್ನು ಡಿಸೆಂಬರ್ 7ರಂದು ಆಚರಿಸಲಾಯಿತು. ಸಂಸ್ಥೆಯ ಚೇರ್‍ಮೇನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಕೇಶವಪ್ರಸಾದ್ ಮುಳಿಯರವರು ದೀಪ ಬೆಳಗಿಸಿ ಮಾತನಾಡಿ ಸಂಸ್ಥೆಯು ಸ್ಥಾಪಕರ ದಿನಾಚರಣೆ ಪ್ರಯುಕ್ತ ಡಿಸೆಂಬರ್ 7, 8, 9ರಂದು ಗ್ರಾಹಕರು ನಮ್ಮಲ್ಲಿ ಖರೀದಿಸಿದ ಪ್ರತೀ ಗ್ರಾಂನಲ್ಲಿ ರೂ.50ನ್ನು ವ್ಯಾಪಾರ ಯಾ ಉದ್ಯಮ ಕ್ಷೇತ್ರದಲ್ಲಿ ಸಾಧನೆ ಆವಿಷ್ಕಾರ ಮಾಡಿದವರನ್ನು ಗುರುತಿಸಲು ವಿನಿಯೋಗಿಸಲಾಗುವುದು ಎಂದರು.

ಈಗಾಗಲೇ ಹಲವಾರು ವರ್ಷಗಳಿಂದ ಈ ರೀತಿಯ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದು ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ಈ ಹಣವನ್ನು ವಿನಿಯೋಗಿಸಲಾಗಿದೆ. 75 ವರ್ಷಗಳ ಸಂಭ್ರಮದಲ್ಲಿರುವ ನಮ್ಮ ಸಂಸ್ಥೆಗೆ ಗ್ರಾಹಕರ ಸೇವೆ ಹಾಗೂ ಸಂತೃಪ್ತಿಯೇ ನಮ್ಮ ಮುಖ್ಯ ಧ್ಯೇಯ. ಇದಲ್ಲದೆ, ನಮ್ಮ ಸಂಸ್ಥೆಯಿಂದ ಹಲವಾರು ಸಾಮಾಜಿಕ ಕಾರ್ಯಗಳು ನಡೆಯುತ್ತಿದೆ ಈ ಸಂದರ್ಭದಲ್ಲಿ ನಮ್ಮನ್ನು ಪ್ರೋತ್ಸಾಹಿಸಿದ ಗ್ರಾಹಕರಿಗೆ ಹೃದಯಾಂತರಾಳದ ನಮನಗಳು ಎಂದು ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಕೃಷ್ಣ ನಾರಾಯಣ ಮುಳಿಯರವರು ಹೇಳಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯು ಫ್ಲೋರ್ ಮ್ಯಾನೇಜರ್ ಆಗಿರುವಂತಹ ಯತೀಶ್, ಹೆಚ್.ಆರ್ ಮ್ಯಾನೇಜರ್ ಶಾಮ್‍ಮೂರ್ತಿ, ಪ್ರೊಕ್ಯೂರ್‍ಮೆಂಟ್ ಮ್ಯಾನೇಜರ್ಪ್ರ ಶಾಂತ್, ಆನ್‍ಲೈನ್ ಸೇಲ್ಸ್ ಮ್ಯಾನೇಜರ್ ಲತಾ ಯತೀಶ್, ಶ್ರೀಕೃಷ್ಣ ಮುಂತಾದವರು ಭಾಗವಹಿಸಿದ್ದರು. ಸಂಸ್ಥೆಯ ಫೈನಾನ್ಸ್ ಮ್ಯಾನೇಜರ್ ಶಿವಪ್ರಸಾದ್‍ರವರು ಕಾರ್ಯಕ್ರಮ ನಿರೂಪಿಸಿದರು. ನಮ್ಮ ಎಲ್ಲಾ ಶಾಖೆಗಳಲ್ಲೂ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು