Recent Posts

Monday, January 20, 2025
ಹೆಚ್ಚಿನ ಸುದ್ದಿ

ಭಾರತ ಮೂಲದ ವ್ಯಕ್ತಿಗೆ ನೀಡಲಾಗುತ್ತಿದೆ ವಿಶ್ವದ ಮೊದಲ ಕೋವಿಡ್ ಲಸಿಕೆ..! – ಕಹಳೆ ನ್ಯೂಸ್

ಲಂಡನ್ – ಭಾರತ ಮೂಲದ 87 ವರ್ಷದ ವ್ಯಕ್ತಿಗೆ ವಿಶ್ವದಲ್ಲೇ ಮೊದಲ ಕೋವಿಡ್ ಔಷಧವನ್ನು ನೀಡಲಾಗುತ್ತಿದೆ. ಈಗಾಗಲೇ ಔಷಧವನ್ನು ನೀಡಲು ಬ್ರಿಟನ್ ಸರ್ಕಾರ ತೀರ್ಮಾನ ಮಾಡಿದ್ದು, ಫೈಜರ್ ನ್ಯೂಕಲ್‍ನಲ್ಲಿರುವ ಆಸ್ಪತ್ರೆಯಲ್ಲಿ ಹರಿ ಶುಕ್ಲಾ ಅವರಿಗೆ ನೀಡಲಾಗುತ್ತಿದೆ ಎಂದು ವರದಿ ಮಾಡಲಾಗಿದೆ.

ಈಗಾಗಲೇ ಬ್ರಿಟನ್‍ನ ಪ್ರಧಾನಿ ಬೋರಸ್ ರೋಜನ್ ಅವರು ಈ ಮಂಗಳವಾರ ನಮಗೆ ದೊಡ್ಡ ಪರೀಕ್ಷೆ ಇದೆ. ಇದನ್ನು ನಾವು ವೀ ಡೇ- ವ್ಯಾಕ್ಸಿನ್ ಡೇ ಎಂದು ಕರೆಯಬಹುದು ಎಂದು ಹೇಳಿದ್ದಾರೆ. ಹರಿ ಅವರು ಕೂಡ ನನಗೆ ಈ ಔಷಧ ನೀಡುತ್ತಿರುವುದರಿಂದ ಇದು ನನ್ನ ಜವಾಬ್ದಾರಿ ಎಂದು ಭಾವಿಸುತ್ತೇನೆ.ಖುಷಿಯಾಗಿದೆ. ವಿಶ್ವದಲ್ಲಿ ಎದುರಾಗಿರುವ ಸಂಕಷ್ಟ ದೂರವಾಗಲಿ ಎಂದು ನಾನು ಕೂಡ ಹಾರೈಸುತ್ತೇನೆ ಎಂದು ಹೇಳಿದ್ದಾರೆ. ರಾಷ್ಟ್ರೀಯ ಆರೋಗ್ಯ ಸೇವೆ(ಎನ್‍ಎಚ್‍ಸಿ) ಅಧಿಕಾರಿಗಳು ನನಗೆ ಕರೆ ಮಾಡಿ ಈ ವಿಷಯ ತಿಳಿಸಿದಾಗ ನಂಬಲಾಗಲಿಲ್ಲ. ಅವರ ಚಿನ್ನದ ಹೃದಯಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

90 ವರ್ಷದ ಹಿರಿಯರಲ್ಲಿ ಕೋವಿಡ್ ಗುಣಪಡಿಸುವುದು ಸಾಕಷ್ಟು ಕಷ್ಟಕರವಾಗಿರುತ್ತದೆ. ಜೀವ ಉಳಿಸುವುದು ಮೊದಲ ಕರ್ತವ್ಯವಾಗಿರುತ್ತದೆ. ಹೆಚ್ಚಿನ ಒತ್ತಡದಲ್ಲೂ ನಾವು ನಮ್ಮ ಕಾರ್ಯವನ್ನು ಮುಂದುವರೆಸುತ್ತಿರುವುದಕ್ಕೆ ನಮಗೂ ಸಂತಸ ತಂದಿದೆ ಎಂದು ಎನ್‍ಎಚ್‍ಸಿಯ ಅಕಾರಿಗಳು ತಿಳಿಸಿದ್ದಾರೆ. ಒಟ್ಟಾರೆ ಬ್ರಿಟನ್‍ನಲ್ಲಿ ಔಷಧ ವಿತರಣೆ ಆರಂಭವಾಗಿರುವುದು ಜನರಲ್ಲಿ ಭರವಸೆ ಮೂಡಿಸಿದ್ದು, ಇಡೀ ವಿಶ್ವ ಇದನ್ನು ಎದುರು ನೋಡುತ್ತಿದೆ. ವಿಜ್ಞಾನಿಗಳು ಹಾಗೂ ವೈದ್ಯರ ಸೇವೆ ಶ್ಲಾಘನೀಯ. ನಮ್ಮ ದೇಶದಲ್ಲಿ ಕೊರೊನಾ ವಿರುದ್ಧದ ಹೋರಾಟ ಮುಂದುವರೆಯಲಿದೆ ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು