ವಿಟ್ಲ: ಪುಣಚ ಗ್ರಾಮದ ಕಾಂಗ್ರೆಸ್ ಮುಖಂಡ ಮಹೇಶ್ ಶೆಟ್ಟಿ ಬೈಲುಗುತ್ತು ಬಿಜೆಪಿಗೆ ಸೇರ್ಪಡೆಗೊಂಡ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ಇನ್ನಷ್ಟು ಕಾರ್ಯಕರ್ತರನ್ನು ಪಕ್ಷಕ್ಕೆ ಸೆಳೆದುಕೊಂಡು ಬಿಜೆಪಿ ಮತ್ತಷ್ಟೂ ಸುಭದ್ರಗೊಂಡಿದೆ.
ಡಿ.4 ರಂದು ಮಹೇಶ್ ಶೆಟ್ಟಿ ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ಅವರೊಂದಿಗೆ ಅವರ ಪರವಾದ ಹಲವಾರು ಬೆಂಬಲಿಗರು ಬಿಜೆಪಿಗೆ ಸ್ವ ಇಚ್ಛೆಯಿಂದ ಸೆರ್ಪಡೆಗೊಂಡರು. ಹಾಗೆಯೇ ಪುಣಚ ಗ್ರಾಮದ ಯುವ ಉದ್ಯಮಿ ಪೀತಂ ಪೂಂಜರನ್ನು ಎರಡು ಪಕ್ಷಗಳ ಮುಖಂಡರು ತಮ್ಮ ತಮ್ಮ ಪಕ್ಷದೊಳಗೆ ಸೆಳೆದುಕೊಳ್ಳಲು ಪ್ರಯತ್ನಿಸಿದರು.ಆದರೆ ಕೊನೆಗೂ ಪ್ರೀತಂ ಪೂಂಜ ಬಿಜೆಪಿ ಪಕ್ಷಕ್ಕೆ ಸೇರುವ ಮನದಿಂಗಿತವನ್ನು ವ್ಯಕ್ತಪಡಿಸಿದರು. ಇದಲ್ಲದೆ ಆಪರೇಷನ್ ಕಮಲದ ಪರಿಣಾಮವಾಗಿ ಕಾಂಗ್ರೆಸ್ ನ ಪ್ರಮುಖ ಕಾರ್ಯಕರ್ತರಾದ ನಾರಾಯಣ ಪೂಜಾರಿ ನೀರುಮಜಲು, ಜಾಣು ನಾಯ್ಕ ನೀರುಮಜಲು, ರವಿ ತೋರಣಕಟ್ಟೆ, ಪ್ರಜ್ವುಲ್ ಗುಡ್ಡೆಗದ್ದೆ ಬಿಜೆಪಿಗೆ ಸೇರಿಕೊಂಡರು . ಹಾಗೂ ಪಕ್ಷದ ಹಿರಿಯ ಮಾರ್ಗದರ್ಶಕ ಎಸ್ .ಆರ್. ರಂಗಮೂರ್ತಿಯವರ ಮನೆಯಲ್ಲಿ ಸೇರ್ಪಡೆ ಪ್ರಕಿಯೆ ನಡೆಯಿತು. ಈ ಸಂದರ್ಭದಲ್ಲಿ ಬಿಜೆಪಿಯ ಮಂಡಳ ಅಧ್ಯಕ್ಷ ಸಾಜ ರಾಮಕೃಷ್ಣ ಆಳ್ವ, ನಿಕಟಪೂರ್ವ ಮಂಡಲ ಅಧ್ಯಕ್ಷರಾದ ಚನಿಲ ತಿಮ್ಮಪ್ಪ ಶೆಟ್ಟಿ, ಪುತ್ತೂರು ನಗರಸಭಾ ಅಧ್ಯಕ್ಷ ಜೀವಂದರ್ ಜೈನ್, ಪುಣಚ ಶಕ್ತಿಕೇಂದ್ರ 1,2 ಅಧ್ಯಕ್ಷ ಜಯಂತ ಓಟೆತಟ್ಟ, ಉದಯಭಾಸ್ಕರ, ಆಜೇರು ಉಪಸ್ಥಿತರಿದ್ದರು. ರಾಧಾಕೃಷ್ಣ ಮೂಡಂಬೈಲು ಸ್ವಾಗತಿಸಿದರು. ಮತ್ತು ಉದಯ ಕುಮಾರ್ ದಂಬೆ ವಂದಿಸಿದರು.