Wednesday, January 22, 2025
ಪುತ್ತೂರು

ತುಳುನಾಡಿನ ಕಾರಣಿಕ ಪುರುಷರಾದ ಪಡುಮಲೆ ಕೋಟಿ ಚೆನ್ನಯರ ಜನ್ಮಸ್ಥಳ ಬ್ರಹ್ಮ ಕಲಶೋತ್ಸವದ ಪೂರ್ವಭಾವಿ ಸಭೆ; ಜನವರಿಯಲ್ಲಿ ಕಛೇರಿ ಉದ್ಘಾಟನೆ-ಕಹಳೆ ನ್ಯೂಸ್

ಪುತ್ತೂರು: ತುಳುನಾಡಿನ ಕಾರಣಿಕ ಪುರುಷರಾದ ಕೋಟಿ ಚೆನ್ನಯರ ಜನ್ಮಸ್ಥಳ ಪಡುಮಲೆಯಲ್ಲಿ ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್ ನ ವತಿಯಿಂದ ಜೀರ್ಣೋದ್ಧಾರ ಗೊಂಡಿರುವ ಕೋಟಿ ಚೆನ್ನಯರ ಆರಾಧ್ಯ ದೇವರಾದ ನಾಗಬೆರ್ಮರಗುಡಿ ತೀರ್ಥಬಾವಿ ನಾಗಸನ್ನಿಧಿ ರಕ್ತೇಶ್ವರಿ ಮತ್ತು ದೇಯಿಬೈದತಿ ಸಮಾಧಿ ಸ್ಥಳಗಳ ಬ್ರಹ್ಮ ಕಲಶೋತ್ಸವದ ಪೂರ್ವಭಾವಿ ಸಭೆಯು ಬಪ್ಪಳಿಗೆ ಬ್ರಹ್ಮ ಶ್ರೀ ನಾರಾಯಣ ಗುರು ಸ್ವಾಮಿ ಬಿಲ್ಲವ ಸಭಾ ಭವನದಲ್ಲಿ ಡಿಸೆಂಬರ್ 6 ರಂದು ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಭೆಯಲ್ಲಿ ಮಾತನಾಡಿದ ಟ್ರಸ್ಟ್ ನ ಅಧ್ಯಕ್ಷ ಹರಿಕೃಷ್ಣ ಬಂಟ್ಚಾಳ್ 5 ಶತಮಾನಗಳ ಇತಿಹಾಸವಿರುವ ಕೋಟಿ ಚೆನ್ನಯರ ಜನ್ಮಸ್ಥಾನ ಮೂಲಸ್ಥಾನದ ಕುರಿತು ಗೊಂದಲ ಜಿಜ್ಞಾಸೆಗಳನ್ನು ದೂರಮಾಡಿ ಸತ್ಯ ವಿಚಾರಗಳನ್ನು ಸಮಾಜಕ್ಕೆ ನೀಡುವುದು .ಆದರೆ ಮೂಲಸ್ಥಾನ ಕತ್ತಲೆಯಲ್ಲಿರುವ ಬಗ್ಗೆ ಯಾರೂ ಮಾತಾನಾಡುತ್ತಿಲ್ಲ .ಟ್ರಸ್ಟ್ ನ ಧ್ಯೇಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ವಿವಿಧ ಕಡೆಗಳಿಗೆ ಹೆಸರಿಡುವಂತೆ ಒತ್ತಾಯ ಮಾಡಲಾಗುತ್ತಿದೆ.ಹಾಗಾಗಿ ‌ಪ್ರಶ್ನಾಚಿಂತನೆಯಲ್ಲಿ ದೈವಜ್ಞರ ಸಲಹೆಯಂತೆ ಮೂಲಸ್ಥಾನದ ಅಭಿವೃದ್ಧಿ ಕಾರ್ಯಗಳು ನಡೆಸಿದೆ. ಇದರ ಬ್ರಹ್ಮ ಕಲಶವು ಎಪ್ರಿಲ್ ನಲ್ಲಿ ನಡೆಯಲಿದೆ.ಇದಕ್ಕೆ ಸಂಬಂಧಿಸಿದ ಕಚೇರಿಯು ಜನವರಿಯಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಹೇಳಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೌರವಾಧ್ಯಕ್ಷ ರುಕ್ಮಯ ಪೂಜಾರಿ ವಹಿಸಿದ್ದರು.ಮತ್ತು ಹಿಂದು ಸಂಘಟನೆಗಳ‌ ಮುಖಂಡ ಅರುಣ್ ಕುಮಾರ್ ಪುತ್ತಿಲ, ಆಡಳಿತ ಮೊಕ್ತೇಸರ ಚಲನಚಿತ್ರ ನಟ ವಿನೋದ್ ಆಳ್ವ, ಮೊಕ್ತೇಸರ ರತನ್ ಕುಮಾರ್ ನಾಯಕ್ ,ಆರಿಗ ಪೆರ್ಮುಂಡ ಗರಡಿಯ ಮೊಕ್ತೇಸರ ಡಾ.ಅಶೋಕ್ ಪಡಿವಾಳ್, ಕೊಟ್ಟಿಬೆಟ್ಟು ಏಳ್ನಾಡು ಟ್ರಸ್ಟ್ ನ ರಾಧಾಕೃಷ್ಣ ನಾಯಿಕ್, ಟ್ರಸ್ಟ್ ನ ಉಪಾಧ್ಯಕ್ಷ ಯೋಗೀಶ್,‌ಪಾಪೆಮಜಲು‌ ಗರಡಿಯ ಮುಕುಂದ ಶಾಂತಿವನ ನ್ಯಾಯವಾದಿ ಚಿದಾನಂದ ಬೈಲಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಹಾಗೆಯೇ ಕೇಶವ ಪೂಜಾರಿ ಬೆದ್ರಾಳ ,ಮೋನಪ್ಪ ಕರ್ಕೇರಾ ,ಶ್ರೀನಿವಾಸ ಪೆರ್ವೋಡಿ, ಕೋಡಿಬಾಂಡಿ ಗ್ರಾಮ.ಪಂಚಾಯತಿ ಮಾಜಿ ಸದಸ್ಯ ರಾಮಚಂದ್ರ ಪೂಜಾರಿ, ಕಲಾವಿದ ಕೃಷ್ಣಪ್ಪ, ಗುರುಪ್ರಸಾದ್ ರೈ ಕುದ್ಕಾಡಿ, ವೇದನಾಥ ಸುವರ್ಣ, ಕಬಕ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಬಾಲಕೃಷ್ಣ ಪೂಜಾರಿ, ಪಲ್ಲತ್ತಾರು ಸೇರಿದಂತೆ ಹಲವು ಮಂದಿ ಸಭೆಯಲ್ಲಿ ಭಾಗವಹಿಸಿದ್ದರು.ಹಾಗೂ ವಿಜಯ್ ಕುಮಾರ್ ಸೊರಕೆ ಸ್ವಾಗತಿಸಿದರು.ಮತ್ತು ಶೇಖರ್ ನಾರಾವಿ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು