ಬಂಟ್ವಾಳ: ಕರಾವಳಿ ಮತ್ತು ದಕ್ಷಿಣ ಕನ್ನಡ ಒಳನಾಡಿನ ಭಾಗ ಬೆಂಗಳೂರು, ಮಂಗಳೂರಿನಲ್ಲಿ ಮಂಗಳವಾರ ಸಂಜೆ ವೇಳೆ ಭಾರೀ ಮಳೆ ಸುರಿಯುವ ಕುರಿತು ಹವಾಮಾನ ಇಲಾಖೆ ನೀಡಿದ ಮುನ್ಸೂಚನೆ ನಿಜವಾಗಿದ್ದು, ಇಂದು ಸಂಜೆ ಸುಮಾರು 6ರ ಬಳಿಕ ತಾಲೂಕಿನ ಹಲವೆಡೆ ಗಾಳಿ, ಗುಡುಗು, ಸಿಡಿಲಿನ ಸಹಿತ ಮಳೆಯಾಗಿದೆ.
ಭಾರಿ ಸೆಖೆ ಇದ್ದ ಪ್ರದೇಶಗಳಲ್ಲಿ ಈಗ ತಂಪಾದ ವಾತಾವರಣ ಮೂಡಿದ್ದರೆ,ಒಂದೆಡೆ ಬೀದಿ ಬದಿಯಲ್ಲಿ ವ್ಯಾಪಾರ ನಡೆಸುವವರು , ಬಸ್ ನಿಲ್ದಾಣಗಳಲ್ಲಿ ಕಾಯುವವರು, ಸಮಸ್ಯೆ ಅನುಭವಿಸಬೇಕಾಯಿತು. ಇನ್ನೊಂದೆಡೆ ಮಳೆಯಿಂದಾಗಿ ಕೆಲವೆಡೆ ರಸ್ತೆ ಬದಿ ಹಾಕಿದ ಮಣ್ಣು ರಸ್ತೆಗೆ ಬಂದಿದೆ. ಇದರಿಂದಾಗಿ ವಾಹನ ಸವಾರರೂ ರಾತ್ರಿ ವೇಳೆ ಜಾಗ್ರತೆಯಿಂದ ತೆರಳದೇ ಇದ್ದರೆ ಅಪಘಾತ ಭೀತಿ ಎದುರಿಸಬೇಕಾಗಬಹುದು.