Monday, January 20, 2025
ಹೆಚ್ಚಿನ ಸುದ್ದಿ

ಅಮಿತ್ ಶಾ – ರೈತ ನಾಯಕರ ಸಭೆ ವಿಫಲ : ಇಂದು ನಡೆಯಬೇಕಿದ್ದ ಆರನೇ ಸುತ್ತಿನ ಮಾತುಕತೆ ರದ್ದು – ಕಹಳೆ ನ್ಯೂಸ್

ನವದೆಹಲಿ: ಮಂಗಳವಾರ ರೈತರು ಕೃಷಿ ಮಸೂದೆ ವಿರೋಧಿಸಿ ಭಾರತ್ ಬಂದ್ ನದೆಸಿದ್ದು, ಇದರ ಬೆನ್ನಲ್ಲೇ ಮಂಗಳವಾರ ರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ರೈತ ಮುಖಂಡರ ನಡುವೆ ನಡೆದ ಸಭೆ ನಡೆದಿದ್ದು, ಅದು ವಿಫಲವಾಗಿದೆ ಎಂದು ತಿಳಿದು ಬಂದಿದೆ.

ಅಮಿತ್ ಶಾ ಮನವಿ ಹಿನ್ನೆಲೆಯಲ್ಲಿ 13ಕ್ಕೂ ಹೆಚ್ಚು ರೈತರು ಸಭೆಯಲ್ಲಿ ಪಾಲ್ಗೊಂಡಿದ್ದರು. ಸರ್ಕಾರ ಮತ್ತು ರೈತರು ಪಟ್ಟು ಸಡಿಲಿಸದೆ ತಮ್ಮ ನಿಲುವುಗಳಿಗೆ ಭದ್ರವಾಗಿ ಅಂಟಿಕೊಂಡಿರುವುದರಿಂದ ಮಾತುಕತೆ ಫಲಪ್ರದವಾಗಿಲ್ಲ. ನೂತನ ಕೃಷಿ ಕಾಯ್ದೆಗಳಲ್ಲಿ ತಿದ್ದುಪಡಿಗಳನ್ನು ಮಾಡಲು ಸರ್ಕಾರ ತಯಾರಿದೆ ಎಂದ ಅಮಿತ್​ ಶಾ ಮಾತನ್ನು ನಿರಾಕರಿಸಿದ ರೈತರು ಕಾಯ್ದೆಗಳನ್ನು ಸಂಪೂರ್ಣ ರದ್ದು ಮಾಡಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೆ, ಇಂದು ಕೇಂದ್ರ ಕೃಷಿ ಸಚಿವ ನರೇಶ್​ ಥೋಮರ್​ರೊಂದಿಗೆ ನಡೆಯಬೇಕಿದ್ದ ಆರನೇ ಸುತ್ತಿನ ಮಹತ್ವದ ಸಭೆಯು ಕೂಡ ರದ್ದಾಗಿದೆ ಎಂದು ತಿಳಿದು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು