Wednesday, January 22, 2025
ಸುದ್ದಿ

ಮಂಗಳೂರಿನಲ್ಲಿ ಕಾರು ಮತ್ತು ಬೈಕ್ ಅಪಘಾತ ; ಬೈಕ್ ಸವಾರ ಮೃತ್ಯು- ಕಹಳೆ ನ್ಯೂಸ್

ಮಂಗಳೂರು: ಕಾರು ಮತ್ತು ಮೋಟಾರು ಬೈಕು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ್ದು,ಸಹ ಸವಾರ ಗಾಯಗೊಂಡ ಘಟನೆ ಡಿಸೆಂಬರ್ 8 ರಂದು ಮಂಗಳವಾರ ಮಧ್ಯಾಹ್ನ ಅಲಪೆ ಪಾಡಿಲ್ನ ಆರಣ್ಯ ಭವನ ಬಳಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೃತಪಟ್ಟವನು ಚಿಕ್ಕಮಗಳೂರು ಮೂಲದ ಬೆಂಗಳೂರಿನ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ 21ವಯಸ್ಸಿನ ಸುಮಂತ್ ಎಂದು ತಿಳಿದು ಬಂದಿದೆ. ಹಾಗೆಯೇ ಹಿಂಬದಿಯ ಸೀಟಿನಲ್ಲಿದ್ದ ಅರುಣ್ ಕುಮಾರ್ ಗಾಯಗೊಂಡು ಈ ಅಪಘಾತದಿಂದ ಪಾರಾರಿಯಾಗಿದ್ದಾರೆ.
ಸುಮಂತ್ ಮತ್ತು ಅವರ ಸ್ನೇಹಿತರು ಮೂರು ಮೋಟಾರು ಬೈಕ್‌ಗಳಲ್ಲಿ ವಿವಿಧ ಸ್ಥಳಗಳ ಪ್ರವಾಸದಲ್ಲಿದ್ದರು.ಮತ್ತು ಅವರು ಚಿಕ್ಕಮಗಳೂರಿನಿಂದ ತಮ್ಮ ಪ್ರಯಾಣವನ್ನು ಪ್ರಾರಂಭಿಸಿ, ಧರ್ಮಸ್ಥಳಕ್ಕೆ ಭೇಟಿ ನೀಡಿದರು. ಅವರು ಕಡಲತೀರಗಳಿಗೆ ತೆರಳುತ್ತಿದ್ದಾಗ ಕಾರಿನ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು