Saturday, November 23, 2024
ಹೆಚ್ಚಿನ ಸುದ್ದಿ

ಗುತ್ತಿಗೆ ಜಮೀನಿನಲ್ಲಿ ಕುಲಾಯಿಸಿದ ಅದೃಷ್ಟ – ಕಹಳೆ ನ್ಯೂಸ್

ನವದೆಹಲಿ: ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಕೆಲವೊಮ್ಮೆ ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ. ಅಂಥದ್ದೆ ಮಹಿಮೆ ಇದೀಗ ರೈತನೊಬ್ಬನ ಬದುಕಲ್ಲಿ ನಡೆದಿದ್ದು, ಈ ಸ್ಟೋರಿ ಓದಿದ್ರೆ ಎಂಥಾ ಅದೃಷ್ಟನಪ್ಪಾ ಎಂದು ಹುಬ್ಬೇರಿಸದೇ ಇರಲಾರಿರಿ.

ಎಂದಿನಂತೆಯೇ ಜಮೀನಿನಲ್ಲಿ ಬೆವರು ಹರಿಸುತ್ತಿದ್ದ ರೈತ, ಮುಂದೊಮ್ಮೆ ತನಗೆ ಜಾಕ್​ಪಾಟ್​ ಹೊಡೆಯುತ್ತದೆ ಎಂದು ಆತನೇ ಅಂದುಕೊಂಡಿರಲಿಲ್ಲ. ಯಾರೇ ಕೈಬಿಟ್ಟರು ಭೂತಾಯಿ ಕೈಬಿಡುವುದಿಲ್ಲ ಎಂಬ ಮಾತ ಈ ರೈತನ ಬಾಳಲ್ಲಿ ಅಕ್ಷರಶಃ ನಿಜವಾಗಿದೆ. ಹೇಗೆಂದರೆ ಜಮೀನಿನಲ್ಲಿ ಕೆಲಸ ಮಾಡುವಾಗ ಬರೋಬ್ಬರಿ 60 ಸಾವಿರ ಪೌಂಡ್ (59,03,791 ಲಕ್ಷ ರೂ.)​ ಮೌಲ್ಯದ ಡೈಮಂಡ್​ ಪತ್ತೆಯಾಗಿದೆ.
ಲಖನ್​ ಯಾದವ್​ (45) ಅದೃಷ್ಟ ಕುಲಾಯಿಸಿದ ಮಧ್ಯಪ್ರದೇಶ ಮೂಲದ ರೈತ. ಕಳೆದ ತಿಂಗಳು ಗುತ್ತಿಗೆ ಪಡೆದಿದ್ದ ಜಮೀನಿನಲ್ಲಿ ಲಖನ್​ ಕೆಲಸ ಆರಂಭಿಸಿದ್ದರು. ಹೀಗೆ ಭೂಮಿಯನ್ನು ಅಗೆದು ಹದ ಮಾಡುವಾಗ 14.98 ಕ್ಯಾರಟ್​ ಹರಳೊಂದು ಪತ್ತೆಯಾಗಿದೆ. ಆರಂಭದಲ್ಲಿ ಅದೊಂದು ಉರುಟುಕಲ್ಲೆಂದು ನಿರ್ಲಕ್ಷಿಸಿ ತನ್ನ ಕಾರ್ಯವನ್ನು ಮುಂದುವರಿಸಿದಾಗ ಹರಳಿನ ಮೇಲೆ ಕುಳಿತಿದ್ದ ಧೂಳೆಲ್ಲಾ ಮಾಯವಾಗಿ ಅದು ವಿಭಿನ್ನವಾಗಿ ಹೊಳೆಯಲು ಆರಂಭಿಸಿತು.
ಅನುಮಾನಗೊಂಡ ಲಖನ್​ ತಕ್ಷಣ ಹರಳನ್ನು ತೆಗೆದುಕೊಂಡು ಜಿಲ್ಲೆಯ ಡೈಮಂಡ್​ ಅಧಿಕಾರಿಯ ಬಳಿ ಕೊಂಡೊಯ್ದಿದ್ದಾರೆ. ಪರೀಕ್ಷಿಸಿದಾಗ ಅದು ಕೇವಲ ಹರಳಲ್ಲು ಬರೋಬ್ಬರಿ 60 ಲಕ್ಷ ಬೆಲೆ ಬಾಳೋ ಡೈಮಂಡ್​ ಎಂಬುದು ಗೊತ್ತಾಗಿದೆ. ಹರಾಜಿನಲ್ಲಿ ಡೈಮಂಡ್​ ಅನ್ನು ಮಾರಾಟ ಮಾಡಲಾಗಿದ್ದು, ಅದು ನನ್ನ ಜೀವನವನ್ನೇ ಬದಲಿಸಿತು ಎಂದು ರೈತ ಲಖನ್​ ಹೇಳಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇದೀಗ ತನ್ನ ಪಾಲಿಗೆ ಬಂದಿರುವ ಹಣದಿಂದ ಯಾವುದೇ ದೊಡ್ಡ ಕೆಲಸಕ್ಕೆ ಕೈಹಾಕದೇ ಹಣವನ್ನು ಹಾಗೇ ಉಳಿಸಿಕೊಂಡಿರುವ ಲಖನ್​, ತನ್ನ ಮಕ್ಕಳ ಉನ್ನತ ಶಿಕ್ಷಣಕ್ಕೆ ಮುಡಿಪಾಗಿಡುವುದಾಗಿ ಹೇಳಿದ್ದಾರೆ. ಈಗಾಗಲೇ ಅದೇ ಹಣದಲ್ಲಿ ಒಂದು ಮೋಟರ್​ ಸೈಕಲ್​, ಎರಡು ಎಕರೆ ಭೂಮಿ ಮತ್ತು ಎರಡು ಎಮ್ಮೆಯನ್ನು ಖರೀದಿಸಿದ್ದಾರೆ. ನಾನು ಸೈಕಲ್​ನಲ್ಲೇ ತೃಪ್ತಿಯಾಗಿದ್ದೆ. ಆದರೆ, ನನ್ನ ಸೋದರಳಿಯರು ಒತ್ತಾಯಿಸಿದ್ದಕ್ಕಾಗಿ ಮೋಟರ್​ ಸೈಕಲ್​ ತೆಗೆದುಕೊಂಡಿದ್ದಾಗಿ ಲಖನ್​ ತಿಳಿಸಿದ್ದಾರೆ.

ಇನ್ನು ಡೈಮಂಡ್​ ಪತ್ತೆಯಾದ ಜಮೀನಿನಲ್ಲಿ ಪತ್ತೆ ಕಾರ್ಯವನ್ನು ಮತ್ತಷ್ಟು ಮುಂದುವರಿಸುತ್ತೇನೆ. ಮತ್ತೊಂದು ಡೈಮಂಡ್​ ಸಿಗುವ ಭರವಸೆ ಇದೆ. ಮತ್ತಷ್ಟು ತಿಂಗಳು ಕಾಲ ಶೋಧ ಕಾರ್ಯ ಮುಂದುವರಿಸುತ್ತೇನೆ. ಇದಕ್ಕಾಗಿ ಬಹುಶಃ ನಾನು ಪಡೆದ ಗುತ್ತಿಗೆಯನ್ನು ನವೀಕರಿಸಬಹುದೇನೋ ಎಂದು ಲಖನ್​ ಮಾಧ್ಯಮಗಳಿಗೆ ಹೇಳಿದರು.