Monday, January 20, 2025
ಸುದ್ದಿ

ಮಂಗಳೂರು ಕೋಟಿ ಚೆನ್ನಯ್ಯ ಏರ್ ಪೋರ್ಟ್ ಗೆ ಸುಸ್ವಾಗತ-ಕಹಳೆ ನ್ಯೂಸ್

ಮಂಗಳೂರು:ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯರ ಹೆಸರನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಡಬೆಂಕೆಂದು ಹೋರಾಟ ನಡೆಸುತ್ತಿದ್ದ ಕಾಂಗ್ರೆಸ್ ಇದೀಗ ವಿಭಿನ್ನ ಹಾದಿ ತುಳಿದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಯುವ ಕಾಂಗ್ರೆಸ್ ಇದೀಗ ‘ಕೋಟಿ ಚೆನ್ನಯ್ಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುಸ್ವಾಗತ ‘ ಅನ್ನೋ ಹೋರ್ಡಿಂಗ್ಸ್ ಗಳನ್ನ ಅಳವಡಿಸಿದ್ದು ಜನರ ಗಮನ ಸೆಳೆಯುವಂತಿದೆ. ಹಾಗೆಯೇ ವಿಮಾನ ನಿಲ್ದಾಣದ ಪ್ರವೇಶ ದ್ವಾರ, ನಿರ್ಗಮನ ದ್ವಾರ,ಮತ್ತು ಪ್ರಮುಖ ರಸ್ತೆಯ ಬಳಿ ದೊಡ್ಡದಾದ ಮೂರು ಹೋರ್ಡಿಂಗ್ಸ್ ಗಳನ್ನ ಅಳವಡಿಸಲಾಗಿದೆ. ಅದರಲ್ಲಿ ಎರಡು ಹೋರ್ಡಿಂಗ್ಸ್ ಗಳಲ್ಲಿ ಯೂತ್ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಮಿಥುನ್ ರೈ ಹೆಸರಿದ್ದರೆ, ಇನ್ನೊಂದರಲ್ಲಿ ಮಿಥುನ್ ರೈ ಜೊತೆ ಮಾಜಿ ಸಚಿವ ಅಭಯಚಂದ್ರ ಜೈನ್ ಅವರ ಹೆಸರಿದೆ. ಈ ಮೂಲಕ ಕಾಂಗ್ರೆಸ್ ವಿಭಿನ್ನ ಹೋರಾಟದ ಹಾದಿಯನ್ನು ಹಿಡಿದಿದ್ದು, ಈ ಹಿಂದೆ ಮೂರು ಹಂತಗಳಲ್ಲಿ ಹೋರಾಟವನ್ನು ಕೈಗೆತ್ತಿಕೊಂಡಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಅದಲ್ಲದೇ ಕಳೆದ ವಾರವಷ್ಟೇ ಪಂಜಿನ ಮೆರವಣಿಗೆ ನಡೆಸುವ ಮೂಲಕ ತೀವ್ರ ಹೋರಾಟದ ಎಚ್ಚರಿಕೆಯನ್ನು ನೀಡಿತ್ತು.ಆದರೆ ಇನ್ನೂ ಹೋರ್ಡಿಂಗ್ಸ್ ಅಳವಡಿಕೆ ಬಗ್ಗೆ ಮಾಹಿತಿ ನೀಡಿರುವ ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ, ಕಾಂಗ್ರೆಸ್ ಈಗಾಗಲೇ ‘ಅದಾನಿ ಏರ್ ಪೋರ್ಟ್’ ಹೆಸರಲ್ಲಿ ಇರುವ ವಿಮಾನ ನಿಲ್ದಾಣವನ್ನು “ಕೋಟಿ ಚೆನ್ನಯ್ಯ ” ಏರ್ ಪೋರ್ಟ್ ಎಂದು ನಿರ್ಧರಿಸಿ, ಹೋರ್ಡಿಂಗ್ಸ್ ಗಳನ್ನ ಅಳವಡಿಸಲಾಗಿದೆ ಎಂದಿದ್ದಾರೆ.