ಪುತ್ತೂರಿನಲ್ಲಿ ಮಹಿಳೆಯರಿಗೆ ಕೆಲಸದ ಆಮಿಷವೊಡ್ಡಿ ಲಕ್ಷಾಂತರ ರೂಪಾಯಿ ವಂಚನೆ; ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲು- ಕಹಳೆ ನ್ಯೂಸ್
ಪುತ್ತೂರು:ಯುವತಿಯರಿಗೆ ಕೆಲಸ ಕೊಡಿಸುವ ಆಸೆ ತೋರಿಸಿ ಅವರಿಂದ ಹಣ ಪಡೆದು ವಂಚಿಸಿರುವ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದರ ಬೆನ್ನಲ್ಲೇ ಇದೀಗ ಗಂಡನ ಸ್ನೇಹಿತನೆಂದು ನಂಬಿಸಿ ನವೆಂಬರ್ 27,ಪುತ್ತೂರಿನ ನಿವಾಸಿಯೊಬ್ಬರು ಮಂಗಳೂರು ಮೂಲದ ಯುವತಿಯರಿಬ್ಬರಿಗೆ ಕೆಲಸ ಕೊಡಿಸುವ ಆಮಿಷವೊಡ್ಡಿ ಹಣ ಪಡೆದು ವಂಚನೆ ಮಾಡಿದ್ದರು. ಈ ಕುರಿತು ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಂಚಿತ ಉಡುಪಿ ಮೂಲದ ಆದರ್ಶ್ ಎಂಬವರು ಎಂದು ತಿಳಿದು ಬಂದಿದೆ. ಇವರು ಆರ್ಯಪು ಗ್ರಾಮದ ಪವಿತ್ರ ಎಂಬವರಿಗೆ ಅವರ ಅಕ್ಕ ಚಿತ್ರ ಅವರಿಂದ 3 ತಿಂಗಳ ಹಿಂದೆ ಪರಿಚಯವಾದರು. ಅವರು ತಿಂಗಳಿಗೆ ಉತ್ತಮ ಸಂಬಳ ನೀಡುವ ಕಂಪೆನಿಯಲ್ಲಿ ಕೆಲಸ ಕೊಡಿಸುವ ಭರವಸೆ ನೀಡಿದ್ದು, ಕೆಲಸ ಕೊಡಿಸುವುದಕ್ಕಾಗಿ ಪವಿತ್ರ ಮತ್ತು ಅವರ ಅಕ್ಕ ಚಿತ್ರ ಅವರಿಂದ ಪದೇಪದೇ ಹಣ ಪಡೆಯುತ್ತಿದ್ದಾರು. ಅವರು ಇಲ್ಲಿಯವರೆಗೆ ಸುಮಾರು 10 ಲಕ್ಷ ರೂ. ಪಡೆದುಕೊಂಡಿದ್ದಾರೆ. ಅಲ್ಲದೇ ಇದೀಗ ಕೆಲಸವೂ ಕೊಡಿಸದೆ ಹಣವನ್ನು ಹಿಂದಿರುಗಿಸದೆ, ವಂಚನೆ ಮಾಡಿದ್ದಾರೆ. ಎಂದು ಪವಿತ್ರ ಅವರು ಆದರ್ಶ್ ಅವರ ಮೇಲೆ ಪುತ್ತೂರು ನಗರ ಠಾಣೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಿದ್ದಾರೆ.