Wednesday, January 22, 2025
ಹೆಚ್ಚಿನ ಸುದ್ದಿ

ಮಾಣಿ ಪ್ರೌಢಶಾಲೆಯಲ್ಲಿ‌ ನಿವೃತ್ತ ಬಿ.ಕೃಷ್ಣಪ್ಪ ನಾಯ್ಕ್ ಅವರ ಬೀಳ್ಕೊಡುಗೆ ಕಾರ್ಯಕ್ರಮ- ಕಹಳೆ ನ್ಯೂಸ್

ಬಂಟ್ವಾಳ: ಮಾಣಿ ಪ್ರೌಢಶಾಲೆಯಲ್ಲಿ ಸುಮಾರು 34 ವರ್ಷಗಳಿಂದ ಜವಾನರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಬಿ.ಕೃಷ್ಣಪ್ಪ ನಾಯ್ಕ್ ಅವರ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಣಿ ವಿದ್ಯಾಭಿವರ್ಧಕ ಸಂಘದ ಅಧ್ಯಕ್ಷ ಕಿರಣ್ ಹೆಗ್ಡೆ, ಅವರು ಕೃಷ್ಣಪ್ಪ ನಾಯ್ಕ್ ರ ಸೇವೆಯನ್ನು ಶ್ಲಾಘಿಸಿದರು. ಮುಖ್ಯ ಅತಿಥಿಯಾಗಿ ತುಂಬೆ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿ ಪಾಲ್ ಗಂಗಾಧರ ಆಳ್ವ ಶುಭ ಹಾರೈಸಿದರು. ಹಾಗೆಯೇ ಮಾಣಿ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಲ್ ಶ್ರೀ ದೇವಿ, ಆಂಗ್ಲ ಮಾಧ್ಯಮ ಶಾಲೆ ಮುಖ್ಯ ಶಿಕ್ಷಕಿ ಸಾರಿಕ, ಮತ್ತು ಆಡಳಿತ ಮಂಡಳಿ ಉಪಾಧ್ಯಕ್ಷ ಮಹಮ್ಮದ್ ಹಬೀಬ್, ಶಾಲಾ ಸಂಚಾಲಕ ಇಬ್ರಾಹಿಂ ಕೆ. ಹಾಗೂ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಹಮೀದ್ ಕಂದಕ್ , ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಕ ಗಂಗಾಧರ ರೈ, ಪ್ರಶಾಂತ್ ಕುಮಾರ್ ಕೈರಂಗಳ, ಪ್ರೌಢಶಾಲಾ, ಪದವಿ ಪೂರ್ವ, ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕ ವೃಂದ ಹಾಗೂ ಇತರ ವಿಭಾಗಗಳ ಸಿಬ್ಬಂದಿ ಹಾಜರಿದ್ದರು. ಮತ್ತ ಮತ್ತು ಕಾರ್ಯಕ್ರಮವನ್ನು ಮುಖ್ಯೋಪಾಧ್ಯಾಯ ಬಿ.ಕೆ.ಭಂಡಾರಿ ಸ್ವಾಗತಿಸಿದ್ದು, ಶಿಕ್ಷಕ ಚೆನ್ನಪ್ಪ ಗೌಡ ವಂದಿಸಿದರು.ಮತ್ತು ಜಯರಾಮ ಕೆ. ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು