Wednesday, January 22, 2025
ಹೆಚ್ಚಿನ ಸುದ್ದಿ

ಹಾಲಾಡಿಯಲ್ಲಿ ಸೇತುವೆಗೆ ಕಾರೊಂದು ಡಿಕ್ಕಿ ಹೊಡೆದು ಭೀಕರ ಅಪಘಾತ ;ಕೆಎಂಫ್ ನಿರ್ದೇಶಕ ರಾಜೀವ ಶೆಟ್ಟಿ ಸಾವು-ಕಹಳೆ ನ್ಯೂಸ್

ಹಾಲಾಡಿ: ಸೇತುವೆಗೆ ಕಾರೊಂದು ಡಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ಹಾಲಾಡಿಯಲ್ಲಿ ಬುಧವಾರ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಘಟನೆಯಲ್ಲಿ ಮೃತಪಟ್ಟವರು ಕೆಎಂಫ್ ನಿರ್ದೇಶಕ ಹದ್ದೂರು ರಾಜೀವ ಶೆಟ್ಟಿ ಎಂದು ತಿಳಿದುಬಂದಿದೆ. ಇವರು ಹಾಲಾಡಿಯಲ್ಲಿ ಕಾರ್ಯಕ್ರಮ ಮುಗಿಸಿ ಶಂಕರನಾರಾಯಣಕ್ಕೆ ಬರುತ್ತಿರುವ ವೇಳೆ ಹಾಲಾಡಿಯಲ್ಲಿ ಸೇತುವೆಗೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ರಾಜೀವ ಶೆಟ್ಟಿ ಅವರನ್ನು ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕರೆತರುವ ಸಂದರ್ಭದಲ್ಲಿ ದಾರಿ ಮಧ್ಯೆ ಸಾವನ್ನಪ್ಪಿದ್ದು. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವರು ಪ್ರಶಸ್ತಿ ಪುರಸ್ಕೃತ ಪ್ರಗತಿಪರ ಕೃಷಿಕರಾಗಿದ್ದು, ಹೈನುಗಾರಿಕೆಯಲ್ಲಿ ಉತ್ತಮ ಸಾಧನೆಯನ್ನು ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಲ್ಲದೆ ಇವರು ತಮ್ಮ 15 ಎಕರೆ ಭೂಮಿಯ 11 ಎಕರೆ ಗುಡ್ಡ ಪ್ರದೇಶವನ್ನು ಕೃಷಿ ಭೂಮಿಗಾಗಿ ಪರಿವರ್ತಿಸಿ, ಬರಡು ಭೂಮಿಗೆ ಜೀವಕಳೆ ತುಂಬಿದ್ದಾರೆ.35 ವರ್ಷಗಳಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಇವರಿಗೆ ಕುಂದಾಪುರ ತಾಲೂಕು ಉತ್ತಮ ಕೃಷಿಕ ಪ್ರಶಸ್ತಿ, ಸಬ್ಲಾಡಿ ಸೀನಪ್ಪ ಶೆಟ್ಟಿ ಕೃಷಿ ಸಾಧಕ ಪ್ರಶಸ್ತಿಗಳು ಲಭಿಸಿದ್ದಲ್ಲದೇ ಇವರಿಗೆ ಅನೇಕ ಸಂಘ, ಸಂಸ್ಥೆಗಳಿಂದ ಸಮ್ಮಾನಗಳು ಸಂದಿವೆ. ಇವರು ಕೆ.ಎಂ.ಎಫ್.ನಿರ್ದೇಶಕರಾಗಿ, ಬೈಲೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ, ಶಂಕರನಾರಾಯಣ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ,ಮಾಜಿ ಸದಸ್ಯರಾಗಿ, ಬಿಜೆಪಿ ಪಕ್ಷದಲ್ಲಿ ಅನೇಕ ಹುದ್ದೆಗಳನ್ನು ಅಲಂಕರಿಸಿದ್ದರು.