ಮಾ,26: ಈ ಹಿಂದೆ ಇದ್ದ, ಬೆರಳಚ್ಚು, ಕಣ್ಣಿನ ಸ್ಕ್ಯಾನ್ ಜತೆಗೆ ಮುಖ ಗುರುತಿಸುವ ಮೂಲಕ ಆಧಾರ್ ದೃಢೀಕರಣದ ತಂತ್ರಜ್ಞಾನವನ್ನು ಜುಲೈ 1ರಿಂದ ಜಾರಿಗೆ ತರಲು ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರವು (ಯುಐಡಿಎಐ) ರೆಡಿ ಮಾಡಿಕೊಂಡಿದೆ.ವಯೋಸಹಜ ಸಮಸ್ತೆ ಇರುವವರು, ಬೆರಳಚ್ಚು ಸ್ಪಷ್ಟವಾಗಿ ಮೂಡದೇ ಇರುವವರಿಗೆ, ಕುಷ್ಟರೋಗಿಗಳಿಗೆ ನೆರವಾಗಲೆಂದು ಮುಖ ದೃಢೀಕರಣ ವ್ಯವಸ್ಥೆಯನ್ನು ಆರಂಭಿಸಲಾಗುವುದು ಎಂದು ಯುಐಡಿಎಐ ಜನವರಿಯಲ್ಲೇ ಘೋಷಿಸಿತ್ತು.
ಕೇವಲ ಮುಖ ದೃಢೀಕರಣ ಮಾತ್ರವಲದೇ ಇದರ ಜತೆಗೆ ಬೇರೊಂದು ಗುರುತಿನ ದೃಢೀಕರಣವೂ ಅಗತ್ಯವಾಗಿದೆ. ಹೀಗಾಗಿ ಬೆರಳಚ್ಚು, ಕಣ್ಣಿನ ಪಾಪೆ ಮತ್ತು ಒಟಿಪಿಯಲ್ಲಿ ಯಾವುದಾದರೂ ಒಂದನ್ನು ಬಳಸಬೇಕು. ಎರಡು ದೃಢೀಕರಣವೂ ಸಂಯೋಜನೆಯಾದಾಗ ಮಾತ್ರ ಇದು ಮೌಲಿಕವಾಗುತ್ತದೆ.