Wednesday, January 22, 2025
ಬಂಟ್ವಾಳ

ಸಜೀಪನಡು, ಜ್ಞಾನ ವಿಕಾಸ ಕಾರ್ಯಕ್ರಮದ ವಾರ್ಷಿಕೋತ್ಸವ-ಕಹಳೆ ನ್ಯೂಸ್

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಬಂಟ್ವಾಳ, ಪಾಣೆಮಂಗಳೂರು ವಲಯ ಮತ್ತು ಸರಕಾರಿ ಆಯುಷ್ ಚಿಕಿತ್ಸಾಲಯ ಸಜೀವ ಮೂಡ ಇವರ ಸಹಭಾಗಿತ್ವದಲ್ಲಿ ಶ್ರೀ ಜ್ಯೋತಿ ಜ್ಞಾನ ವಿಕಾಸ ಕಾರ್ಯಕ್ರಮದ ವಾರ್ಷಿಕ ದಿನಾಚರಣೆ ಮತ್ತು ಮಹಿಳಾ ಸದಸ್ಯರಿಗೆ ಆರೋಗ್ಯ ಮಾಹಿತಿ ಕಾರ್ಯಕ್ರಮ ‌ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರ್ಯಕ್ರಮವು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್ ಅಧ್ಯಕ್ಷತೆಯಲ್ಲಿ , ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಯಶವಂತ್ ದೇರಾಜೆ ಉದ್ಘಾಟಿಸಿದರು. ಮತ್ತು ಮುಖ್ಯ ಅತಿಥಿಗಳಾಗಿ ಅಂಬೇಡ್ಕರ್ ಭವನದ ಆಡಳಿತ ಸಮಿತಿ ಸದಸ್ಯ ಚಂದಪ್ಪ ಭಾಗವಹಿಸಿದ್ದರು. ಹಾಗೆಯೇ ಸರಕಾರಿ ಆರ್ಯುವೇದ ಚಿಕಿತ್ಸಾಲಯ ಸಜಿಪನಡುವಿನ ಆಯುಷ್ ವೈದ್ಯ ಅಧಿಕಾರಿ‌ ಡಾಕ್ಟರ್ ಮಣಿಕರ್ಣಿಕಾ ಆಯುಷ್ ಇಲಾಖೆಯ ಮೂಲಕ ಸಿಗುವ ವೈದ್ಯಕೀಯ ಸೌಲಭ್ಯಗಳನ್ನು ಬಳಸಿಕೊಳ್ಳುವಂತೆ ಹೇಳಿದರು.ಹಾಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸಪ್ನಾ ಪ್ರಸ್ತಾವಿಕ ಮಾತನಾಡಿದರು. ಮತ್ತು ಸರಕಾರಿ ಆರ್ಯುವೇದ ಚಿಕಿತ್ಸಾಲಯ ಸಜೀಪಮೂಡ ಯೋಗ ತರಭೇತಿದಾರರು‌ ವಿನಾಯಕ ಕೃಷ್ಣ ಅವರು ಯೋಗದ ಮೂಲಕ ಆರೋಗ್ಯ ರಕ್ಷಣೆ ಸಹಜ ವಿಧಾನಗಳ ಬಗ್ಗೆ ತಿಳಿಸಿದ್ದು, ಸಜೀಪನಡು ಹಿರಿಯ ಆರೋಗ್ಯ ಸಹಾಯಕಿ ಜಲಜಾಕ್ಷಿ , ಮತ್ತು ಆಯುಷ್ ಇಲಾಖೆಯ ಆರೋಗ್ಯ ಸಹಾಯಕಿ ಸಬಿತ ಸಂಪನ್ಮೂಲ ವ್ಯಕ್ತಿಯಾಗಿ ಮಹಿಳೆಯರ ಆರೋಗ್ಯ ‌ರಕ್ಷಣೆ ಬಗ್ಗೆ ಮಾಹಿತಿ ನೀಡಿದರು.ಹಾಗೆ ಈ ಕಾರ್ಯಕ್ರಮವನ್ನು ‌ಪಾಣೆಮಂಗಳೂರು‌ ವಲಯ ಮೇಲ್ವಿಚಾರಕಿ ಅಮಿತ ನಿರೂಪಣೆ ಮಾಡಿದರು.ನಿಶ್ಚಿತಾ ಸ್ವಾಗತಿಸಿ, ಸೇವಾ ಪ್ರತಿನಿಧಿ ಶಕೀಲಾ ವಂದಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು