Wednesday, January 22, 2025
ಬಂಟ್ವಾಳ

ಮೇಲ್ಕಾರಿನಲ್ಲಿ ಡಿಸೆಂಬರ್13 ರಂದು 21ನೇ ವರ್ಷದ ಯಕ್ಷಗಾನ ಬಯಲಾಟ-ಕಹಳೆ ನ್ಯೂಸ್

ಬಂಟ್ವಾಳ: ಶ್ರೀದೇವಿ ಬಯಲಾಟ ಸಮಿತಿ ಮೆಲ್ಕಾರ್ ಇದರ 21ನೇ ವರ್ಷದ ಯಕ್ಷಗಾನ ಬಯಲಾಟವಾಗಿ ಭಾನುವಾರ 13ರಂದು ರಾತ್ರಿ ನಡೆಯಲಿದೆ.


ರಾತ್ರಿ 9.30ಕ್ಕೆ ಮೆಲ್ಕಾರ್ ಶ್ರೀ ದೇವಿ ಮೈದಾನದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಅವರಿಂದ ದ್ರೌಪದಿ ಪ್ರತಾಪ ಎಂಬ ಪುಣ್ಯ ಕಥಾಭಾಗವನ್ನು ಬಯಲಾಟವಾಗಿ ಆಡಿತೋರಿಸಲಿದ್ದಾರೆ. ಈ ಕಾರ್ಯಕ್ರಮವು ಮೆಲ್ಕಾರ್ ಶ್ರೀದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ಮಧ್ಯಾಹ್ನ ಗಂಟೆ 12 ಕ್ಕೆ ಶ್ರೀದೇವಿಯ ಮಹಾಪೂಜೆ ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ಜರಗಲಿದ್ದು. ಸಂಜೆ 6 ಗಂಟೆಗೆ ಭಜನಾ ಮಂದಿರದಿಂದ ಗೊಂಬೆ ಕುಣಿತದೊಂದಿಗೆ ಶ್ರೀ ದೇವಿಯು ಭವ್ಯ ಮೆರವಣಿಗೆ ಹೊರಡಲಿರುವುದು.ಈ ಮೆರವಣಿಗೆಯಲ್ಲಿ ಆಸಕ್ತರು ಭಾಗವಹಿಸಿ ಕೋವಿಡ್ ನಿಯಮ ಪಾಲಿಸಬೇಕಾಗಿ ಬಯಲಾಟ ಸಮಿತಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು