Wednesday, January 22, 2025
ಪುತ್ತೂರು

ಪುತ್ತೂರು ಪ್ರತಿಷ್ಠಿತ ಕಾಂಪ್ಕೋ ಆಡಳಿತ ಮಂಡಳಿಗೆ ನಿರ್ದೇಶಕರಾಗಿ ಅವಿರೋಧ ಆಯ್ಕೆಯಾದ ಎಸ್.ಆರ್.ಸತೀಶ್ಚಂದ್ರ ಮತ್ತು ಕೆದಿಲ ರಾಘವೇಂದ್ರ ಭಟ್ – ಕಹಳೆ ‌ನ್ಯೂಸ್

 ಪುತ್ತೂರು :ಪುತ್ತೂರು ಪ್ರತಿಷ್ಠಿತ ಕ್ಯಾಂಪ್ಕೋದ 2020-25 ನೇ ಸಾಲಿನ ಆಡಳಿತ ಮಂಡಳಿಗೆ 16 ನಿರ್ದೇಶಕರ ಅವಿರೋಧ ಆಯ್ಕೆ ನಡೆದಿದೆ.ಇವರಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಿಂದ ಹಾಲಿ‌ ಅಧ್ಯಕ್ಷ ಎಸ್ ಆರ್ ಸತೀಶ್ಚಂದ್ರ ಮತ್ತು ಕೆದಿಲ ರಾಘವೇಂದ್ರ ಭಟ್ ರವರಿಗೆ ಸ್ಥಾನ ಲಭಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಾಗೆಯೇ ಡಿಸೆಂಬರ್ 13 ರಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ನಡೆಯಲಿದೆ. ಬಂಟ್ವಾಳ ತಾಲೂಕಿನ ನಿವಾಸಿಯಾಗಿರುವ ಎಸ್ ಆರ್ ಸತೀಶ್ಚಂದ್ರ ಇವರು , ಪ್ರಸ್ತುತ ಕಾಂಪ್ಕೋದ ಅಧ್ಯಕ್ಷರಾಗಿದ್ದು, ಇದೀಗ ನಿರ್ದೇಶಕರಾಗಿ ಪುನರಾಯ್ಕೆಯಾಗಿದ್ದಾರೆ.
ಇವರು ಕಳೆದ ಎರಡೂವರೆ ದಶಕಗಳಿಂದ ಸರಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ವಿವಿಧ ಹುದ್ದೆಗಳನ್ನ ಅಲಂಕರಿಸಿದ್ದಾರೆ.ಹಾಗೆಯೇ ಚೀನಾ, ಹಾಂಗ್ ಕಾಂಗ್,ಥೈಲ್ಯಾಂಡ್, ಮೆಕ್ಸಿಕೊ, ದುಬೈ ಮತ್ತು ಇಂಗ್ಲೆಂಡ್ ಮೊದಲಾದ ದೇಶಗಳಿಗೆ ಪ್ರವಾಸ ಮಾಡಿ ಸರಕಾರಿ ಕಾನೂನು ಅಭ್ಯಾಸಗಳು ಸೇರಿದಂತೆ ಕೃಷಿ ಕುಟುಂಬದಿಂದ ಬೆಳೆದು ಬಂದ ಇವರು ಕೃಷಿ ಕ್ಷೇತ್ರದಲ್ಲಿಯೂ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಕೃಷಿ ವಿಭಾಗದಲ್ಲಿ ಇವರು ಮಾಡಿರುವ ಆವಿಷ್ಕಾರಗಳು ಯುವ ಪೀಳಿಗೆಗೆ ಮತ್ತು ಕೃಷಿ ಸಮುದಾಯಕ್ಕೆ ಸ್ಪೂರ್ತಿಯಾಗಿದೆ.ಹಾಗೆಯೇ ಇನ್ನೊಬ್ಬರು ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಕೆದಿಲ ನಿವಾಸಿಯಾಗಿರುವ ರಾಘವೇಂದ್ರ ಭಟ್ , ಅವರು ಕೆದಿಲ ಹಾಲು ಉತ್ಪಾದಕರ ಸಹಕಾರ ಸಂಘದ ಸ್ಥಾಪಕರಾಗಿದ್ದು, 1996 ರಿಂದ ಇಲ್ಲಿಯವರೆಗೆ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಬಂಟ್ವಾಳ ತಾಲೂಕಿನ ಕೆದಿಲ ದುರ್ಗಾಭವನ ಎಂದೇ ಖ್ಯಾತರಾಗಿದ್ದ ದಿ.ಕೃಷ್ಣ ಭಟ್ಟರ ಪುತ್ರರಾಗಿರುವ ಇವರು ಸಹಕಾರಿ ಕ್ಷೇತ್ರದಲ್ಲಿ, ಕೆದಿಲ ಗ್ರಾಮ ಪಂಚಾಯತಿ ಸದಸ್ಯರಾಗಿ ,ಪುತ್ತೂರು ಬಿಜೆಪಿ ಮಂಡಲದ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಇಂಜಿನಿಯರ್ ನ ಉಪಾಧ್ಯಕ್ಷರಾಗಿರುವ ಇವರು‌ ಕಳೆದ ವರ್ಷ ತೋಡುಗಳಿಗೆ ಸಾಂಪ್ರದಾಯಿಕ ಹಲಗೆಗಳನ್ನು ಇಟ್ಟು ನೀರು ಉಳಿಸುವ ಯೋಜನೆ ಆರಂಭಿಸಿದ್ದು, ಇದರ ಅಭಿವೃದ್ಧಿಗಾಗಿ ‌ಶಾಸಕರ ಮತ್ತು ಸಂಸದರಿಂದ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು