Wednesday, January 22, 2025
ಉಡುಪಿ

ಅಕಾಲಿಕ ಮಳೆ: ಸಿಡಿಲು ಬಡಿದು ವರ್ಕ್ ಫ್ರಂ ಹೋಮ್ ಉದ್ಯೋಗಿ ಸಾವು – ಕಹಳೆ ನ್ಯೂಸ್

ಉಡುಪಿ : ಗುರುವಾರ ರಾತ್ರಿ ಕರಾವಳಿ ಭಾಗದಲ್ಲಿ ಸುರಿದ ಸಿಡಿಲು-ಮಿಂಚು ಸಹಿತ ಮಳೆಗೆ, ಸಿಡಿಲು ಬಡಿದು ಯುವಕನೋರ್ವ ಮೃತಪಟ್ಟಿರುವ ಘಟನೆ ಉಡುಪಿ ಜಿಲ್ಲೆಯ ಕೋಟ ಬಳಿ ನಡೆದಿದೆ.

ಉಡುಪಿಯ ಬ್ರಹ್ಮಾವರ ತಾಲೂಕು ವಂಡಾರಿನ ಬೋರ್ಡಕಲ್ಲಿನ ನಿವಾಸಿ ಸಾಫ್ಟ್ ವೇರ್ ಎಂಜಿನಿಯರ್ ಚೇತನ್ (24) ಮೃತಪಟ್ಟ ಯುವಕನಾಗಿದ್ದಾನೆ.
ಮಳೆ ಬರುತ್ತಿದ್ದ ಸಂದರ್ಭದಲ್ಲಿ ಚೇತನ್ ಮನೆಯೊಳಗಡೆ ಲ್ಯಾಪ್ ಟಾಪ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎನ್ನಲಾಗಿದೆ. ಸಿಡಿಲು ಬಡಿದಾಗ ಗಂಭೀರವಾಗಿ ಅಸ್ವಸ್ಥಗೊಂಡ ಚೇತನ್ರನ್ನು ತತ್‌ಕ್ಷಣ ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಪರೀಕ್ಷಿಸಿದ ವೈದ್ಯರು, ಚೇತನ್ ಮೃತಪಟ್ಟಿರುವುದು ದೃಢಪಡಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಂಗಳೂರಿನ ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪೆನಿಯ ಉದ್ಯೋಗಿಯಾಗಿದ್ದ ಚೇತನ್, ಕೊರೊನಾ ಲಾಕ್ಡೌನ್ ಸಮಸ್ಯೆಯ ನಂತರ ಹಲವು ತಿಂಗಳಿನಿಂದ ಮನೆಯಿಂದಲೇ ಕರ್ತವ್ಯ (ವರ್ಕ್ ಫ್ರಂ ಹೋಮ್)ನಿರ್ವಹಿಸುತ್ತಿದ್ದರು. ಮೃತ ಯುವಕ ಚೇತನ್ ಅವರ ಕಡು ಬಡತನದಿಂದ ಕೂಡಿದ್ದು, ಅದರಲ್ಲಿಯೇ ಸಾಕಷ್ಟು ಕಷ್ಟಪಟ್ಟು ಎಂಜಿನಿಯರಿಂಗ್ ಪದವಿ ಮುಗಿಸಿ, ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಯ ಉದ್ಯೋಗಿಯಾಗಿ ಮನೆಗೆ ಆಧಾರವಾಗಿದ್ದರು. ಹೆತ್ತವರು ಮತ್ತು ಸಹೋದರಿಯನ್ನು ಚೇತನ್ ಅಗಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು