Wednesday, January 22, 2025
ಬಂಟ್ವಾಳ

ಬಂಟ್ವಾಳ ಪುರಸಭೆಯ ಮೊದಲ ಸಾಮಾನ್ಯ ಸಭೆ ; ಸಭೆಯಲ್ಲಿ ಕುಡಿಯುವ ನೀರಿನ ಸರಬರಾಜುನದ್ದೆ ಸಮಸ್ಯೆ- ಕಹಳೆ ನ್ಯೂಸ್

ಬಂಟ್ವಾಳ: ಬಂಟ್ವಾಳದಲ್ಲಿ ನೇತ್ರಾವತಿ ನದಿ ಪಕ್ಕದಲ್ಲಿಯೇ ಹರಿಯುತ್ತಿದ್ದರೂ, ಕುಡಿಯುವ ನೀರಿನ ಸಮಸ್ಯೆ ಆಗಾಗ ಕಾಡುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಾಗಾಗಿ ಇಡೀ ಬಂಟ್ವಾಳಕ್ಕೆ ಪೂರೈಕೆಯಾಗುವ ಸಮಗ್ರ ಕುಡಿಯುವ ನೀರು ಸರಬರಾಜು ಯೋಜನೆಯ ಮೊದಲ ಹಂತದ ಕಾಮಗಾರಿಗಳು, ಕುಡಿಯುವ ನೀರಿನ ಸಮಸ್ಯೆ, ಪೈಪ್ ಲೈನ್ ಸಮಸ್ಯೆ, ಆದರಿಂದಾಗಿ ರಸ್ತೆ ಹಾಳಾಗಿರುವುದು, ಹಳೇ ಲೈನ್ ನಲ್ಲೂ ನೀರು ಹರಿಯುತ್ತಿರುವುದು, ನೀರಿನ ಬಿಲ್ ನ ಗೊಂದಲ, ಕಳೆದ ಕೆಲ ತಿಂಗಳುಗಳಿಂದ ಪುರಸಭೆಯ ಚುನಾಯಿತ ಪ್ರತಿನಿಧಿಗಳನ್ನು ಕಾಡುತ್ತಿದ್ದ ಈ ಸಮಸ್ಯೆಗಳೆಲ್ಲಾ ಪ್ರಶ್ನಾರೂಪದಲ್ಲಿ ಡಿಸೆಂಬರ್ 10ರಂದು ನಡೆದ ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಕೇಳಲಾಯಿತು. ಸಹಾಯಕ ಎಂಜಿನಿಯರ್ ಶೋಭಾಲಕ್ಷ್ಮೀ ಅವರ ಬಳಿ ಪಕ್ಷ ಭೇದ ಮರೆತು ಸದಸ್ಯರು ನೀರಿನ ಸಮಸ್ಯೆಗಳು ಮತ್ತು ಅದಕ್ಕೆ ಸರಿಯಾಗಿ ದೊರಕದ ಸ್ವಂದನೆ ಬಗ್ಗೆ ವಿವರಿಸಿ ತಿಳಿಸಿದರು. ಬಳಿಕ ಅಧ್ಯಕ್ಷ ಮಹಮ್ಮದ್ ಶರೀಪ್ ಅವರು, ಬಂಟ್ವಾಳ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಒದಗಿಸುವ ಯೋಜನೆ ಮೊದಲ ಹಂತದಲ್ಲೇ ಗೊಂದಲಗಳು ಇರುವ ಕಾರಣ, ಜನರ ದೂರುಗಳಿಗೆ ಸಮರ್ಪಕವಾಗಿ ಸ್ವಂದಿಸಿದ ಬಳಿಕವಷ್ಟೇ ಎರಡನೇ ಹಂತದ ಯೋಜಗೆ ಒಪ್ಪಿಗೆ ನೀಡಲಾಗುವುದೆಂದು ಸಭೆಯಲ್ಲಿ ಮಾತನಾಡಿದರು. ಹಾಗೆಯೇ ಎರಡನೇ ಹಂತದ ಕುಡಿಯುವ ನೀರಿನ ವಿತರಣಾ ಕೊಳವೆ ಮಾರ್ಗಗಳನ್ನು ‌ಅಳವಡಿಸುವ ಕಾಮಕಾರಿಯ ಅಂದಾಜು ಪಟ್ಟಿಯ ಮಂಜೂರಾದ ಹಾಗೂ ಉದ್ಧೃತಾ ಅಂದಾಜುಪಟ್ಟಿಗೆ ಮೇಲುರುಜು ಮಾಡುವ ಕುರಿತು ನಿರ್ಣಯವನ್ನು ಪುರಸಭೆಯಲ್ಲಿ ಮಾಡಲಾಯಿತು. ಹಾಗೆ ‌ಬಾರೆಕಾಡು ಆಶ್ರಯ ಕಾಲೊನಿಗೆ ಹಕ್ಕು ಪತ್ರ ದೊರಕದ ವಿಚಾರ, ಬೋಗೋಡಿ ಪರಿಸರದಲ್ಲಿ ಗ್ಯಾಸ್ ಬಂಕ್ ಗೆ ಅನುಮತಿ, ಪ.ಜಾತಿ, ಪಂಗಡಕ್ಕೆ ವಿದ್ಯುತ್ ಬಿಲ್ ಮನ್ನಾ ಸಹಿತ ಹಲವು ವಿಚಾರಗಳು ಚರ್ಚೆಗೆ ಬಂದವು. ಹಾಗೆಯೇ ಬಿಜೆಪಿಯಿಂದ ಹಿರಿಯ ಸದಸ್ಯ ಎ.ಗೋವಿಂದ ಪ್ರಭು, ದೇವಕಿ, ವಿದ್ಯಾವತಿ, ಕಾಂಗ್ರೆಸ್ ಪಕ್ಷದಿಂದ ಪಿ.ರಾಮಕೃಷ್ಣ ‌ಆಳ್ವ, ಲುಕ್ಮಾನ್, ಬಿ.ವಾಸು ಪೂಜಾರಿ, ಗಂಗಾಧರ, ಮಹಮ್ಮದ್ ನಂದರಬೆಟ್ಟು, ಅಬುಬಕ್ಕರ್ ಸಿದ್ಧಿಕ್ ಗುಡ್ಡೆಯಂಗಡಿ, ಜನಾರ್ದನ ಚಂಡ್ತಿಮಾರ್, ಎಸ್.ಡಿ.ಪಿ.ಐನಿಂದ ಸದಸ್ಯರಾದ ಮುನೀಶ್ ಆಲಿ, ಝೀನತ್ ಫಿರೋಜ್, ಸಂಶದ್ ವಿವಿಧ ಚರ್ಚೆಗಳಲ್ಲಿ ಪಾಲ್ಗೊಂಡರು.ಮತ್ತು ಉಪಾಧ್ಯಕ್ಷೆ ಜೆಸಿಂತಾ ಡಿಸೋಜ ಮುಖ್ಯಾಧಿಕಾರಿ ಹಾಗೂ ಲೀನಾ ಬ್ರಿಟ್ಟೋ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು