ನಟಿ ಸಂಜನಾ ಗಲ್ರಾನಿಗೆ ‘ಬಿಗ್ ರಿಲೀಫ್’; ಹೈಕೋರ್ಟ್ನಿಂದ ಷರತ್ತು ಬದ್ಧ ಜಾಮೀನು ಮಂಜೂರು – ಕಹಳೆ ನ್ಯೂಸ್
ಬೆಂಗಳೂರು: ಡ್ರಗ್ಸ್ ಜಾಲದಲ್ಲಿ ಸಕ್ರಿಯರಾಗಿರುವ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟಿ ಸಂಜನಾ ಗಲ್ರಾನಿ ಅವರಿಗೆ ಹೈಕೋರ್ಟ್ ಶುಕ್ರವಾರ ಷರತ್ತಬದ್ಧ ಜಾಮೀನು ಮಂಜೂರು ನೀಡಿದೆ.
ಜಾಮೀನು ಮಂಜೂರು ಮಾಡುವ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ನಿವಾಸ್ ಹರೀಶ್ ಕುಮಾರ್ ಅವರು ಈ ಕೆಳಗಿನ ಷರತ್ತುಗಳನ್ನು ವಿಧಿಸಿತೀರ್ಪು ನೀಡಿದ್ದಾರೆ. ಇದೇ ವೇಳೆ ನ್ಯಾಯಾಲಯ ‘₹3 ಲಕ್ಷ ಮೊತ್ತಕ್ಕೆ ವೈಯಕ್ತಿಕ ಬಾಂಡ್ ಮತ್ತು ಇಬ್ಬರ ಶ್ಯೂರಿಟಿ ಒದಗಿಸಬೇಕು,’ ಎಂದು ಹೇಳಿದ್ದು. , ‘ಪ್ರತಿ ತಿಂಗಳು ಎರಡು ಬಾರಿ ಠಾಣೆಗೆ ಹಾಜರಾಗಬೇಕು, ತನಿಖೆಗೆ ಸಹಕರಿಸಬೇಕು ಅಂತ ತಿಳಿಸಿದೆ.ತನಿಖೆಗೆ ಸಹಕಾರ ನೀಡಿ, ಸಾಕ್ಷ್ಯಗಳನ್ನು ತಿರುಚದಂತೆ ನಿರ್ದೇಶನ ನೀಡಲಾಗಿದೆ.ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ಗಲ್ರಾನಿ ಬಿಡುಗಡೆಯಾಗುವ ನಿರೀಕ್ಷೆ.
ಸ್ಯಾಂಡಲ್ ವುಡ್ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ಅವರನ್ನು ಬಂಧಿಸಲಾಗಿತ್ತು. ತಮಗೆ ಆರೋಗ್ಯ ಸರಿ ಇರದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಜಾಮೀನು ನೀಡುವಂತೆ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿದ್ದ ಸಂಜನಾ ಗಲ್ರಾನಿ ಅವರ ಮನವಿಯನ್ನು ನ್ಯಾಯಾಪೀಠ ಪುರಸ್ಕಾರ ಮಾಡಿ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.