Wednesday, January 22, 2025
ಬಂಟ್ವಾಳ

ಆಯುರ್ವೇದ ವೈದ್ಯರಿಗೆ ಶಸ್ತ್ರ ಚಿಕಿತ್ಸೆ ನಡೆಸಲು ಅವಕಾಶ ನೀಡಿರುವ ಕೇಂದ್ರ ಸರಕಾರದ ಕ್ರಮ ವಿರೋಧಿಸಿ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ- ಕಹಳೆ ನ್ಯೂಸ್

ಬಂಟ್ವಾಳ:  ಆಯುರ್ವೇದ ವೈದ್ಯರಿಗೆ ಶಸ್ತ್ರ ಚಿಕಿತ್ಸೆ ನಡೆಸಲು ಅವಕಾಶ ನೀಡಿರುವ ಕೇಂದ್ರ ಸರಕಾರದ ಕ್ರಮ ವಿರೋಧಿಸಿ , ಭಾರತೀಯ ವೈದ್ಯಕೀಯ ಸಂಘದ ನೇತೃತ್ವದಲ್ಲಿ ಅಲೋಪಥಿ ವೈದ್ಯರು ಶುಕ್ರವಾರ ಹೊರರೋಗಿ ವಿಭಾಗ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದು, ಇವರು ನೀಡಿರುವ ಪ್ರತಿಭಟನೆ ಕರೆಗೆ ಬಂಟ್ವಾಳ ಐಎಂಎ  ಘಟಕದ ವೈದ್ಯರುಗಳು ಕಪ್ಪು ಪಟ್ಟಿ ಧರಿಸಿ ಸೇವೆ ನೀಡುವ ಮೂಲಕ ಬೆಂಬಲ ಸೂಚಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಾಗೆಯೇ ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ಹೊರರೋಗಿಗಳ ಸೇವೆ ಜೊತೆಯಲ್ಲಿ ಒಳರೋಗಿ ವಿಭಾಗದಲ್ಲಿ ಕಪ್ಪು ಪಟ್ಟಿ ಧರಿಸಿ ಸೇವೆ ನೀಡುತ್ತಿದ್ದಾರೆ. ಅಲ್ಲದೇ ರೋಗಿಗಳ ಹಿತದೃಷ್ಟಿಯಿಂದ ತುರ್ತುಚಿಕಿತ್ಸೆಗಳ ಸಹಿತ ಎಲ್ಲಾ ಸೇವೆಗಳು ಲಭ್ಯವಿವೆ ಎಂದು ಬಂಟ್ವಾಳ ಐಎಂಎ ಅಧ್ಯಕ್ಷ ಡಾ| ಪ್ರದೀಪ್ ಕುಮಾರ್ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು