Wednesday, January 22, 2025
ಬಂಟ್ವಾಳ

ಬಂಟ್ವಾಳದ ಪುರಸಭೆಯ ಆರೋಗ್ಯ ಅಧಿಕಾರಿ‌ ಪತ್ರ ಬರೆದು ಆತ್ಮಹತ್ಯೆಗೆ ಯತ್ನ – ಕಹಳೆ ನ್ಯೂಸ್

ಬಂಟ್ವಾಳ: ಸರಕಾರಿ ಉದ್ಯೋಗಿಯೋರ್ವರು ಗುರುವಾರ ಬೆಳಿಗ್ಗೆ ಪತ್ರ ಬರೆದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇವರು ಬಂಟ್ವಾಳ ಪುರಸಭೆಯ ಹೆಲ್ತ್ ಆಫೀಸರ್, ವಿಟ್ಲ ಪುಣಚ ನಿವಾಸಿ ರವಿಕೃಷ್ಣ ಎಂದು ತಿಳಿದುಬಂದಿದೆ. ಇವರು ಸುಳ್ಯ ಪುರಸಭೆಯಿಂದ ಕಳೆದ 5 ತಿಂಗಳ ಹಿಂದೆಯಷ್ಟೆ ಬಂಟ್ವಾಳ ಪುರಸಭೆಗೆ ಆಗಮಿಸಿದ್ರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮೇಲಾಧಿಕಾರಿಗಳ ಮಾನಸಿಕ ಹಿಂಸೆಯನ್ನು ತಾಳಲಾರದೆ ರವಿಕೃಷ್ಣ ಅವರು ಬೇಸರಗೊಂಡು ಆತ್ಮಹತ್ಯೆ ಮಾಡುತ್ತಿದ್ದೇನೆ ಎಂದು ಗುರುವಾರ ಬೆಳಿಗ್ಗೆ ಪತ್ರ ಬರೆದಿಟ್ಟು, ಮೇಲ್ಕಾರ್ ನಲ್ಲಿ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ಮಾಡಿಕೊಳ್ಳುತ್ತಿದ್ದ ವೇಳೆ ಅವರನ್ನು ‌ರಕ್ಷಣೆ ಮಾಡಿ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.