Wednesday, January 22, 2025
ಬಂಟ್ವಾಳ

ಬಿಸಿರೋಡಿನ ಹೆಸರಾಂತ ಮೆಡಿಕಲ್ ಮತ್ತು ದಿನಸಿ ಅಂಗಡಿಯಲ್ಲಿ ಕಳ್ಳತನ- ಕಹಳೆ ನ್ಯೂಸ್

ಬಂಟ್ವಾಳ: ಬಂಟ್ವಾಳ ನಗರ ಪೊಲೀಸ್ ಸ್ಟೇಷನ್ ನ ಕೂಗಳತೆಯ ದೂರದಲ್ಲಿರುವ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡು ಪೇಟೆಯ ಮಧ್ಯ ಭಾಗದಲ್ಲಿ ಹಲವಾರು ವರ್ಷಗಳಿಂದ ಜನರ ಸೇವೆಯಲ್ಲಿರುವ ಹೆಸರಾಂತ ಗಣೇಶ್ ಮೆಡಿಕಲ್ ಸೆಂಟರ್ ಗೆ ಮತ್ತು ಇಸುಬು ಬ್ಯಾರಿಯವರ ಮಗ ಯೂನಸ್ ಎಂಬವರ ದಿನಸಿ ಅಂಗಡಿಯ ಶಟರ್ ನ ಒಳಗೆ ನುಗ್ಗಿ ಡ್ರವರ್ ನೊಳಗೆ ಇದ್ದ ನಗದು ಹಣವನ್ನು ದೋಚಿದ ಘಟನೆ ಬುಧವಾರ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಲಾಕ್ ಡೌನ್ ಬಳಿಕ ವ್ಯಾಪಾರ ಇಲ್ಲದೆ ಜನಜೀವನ ನಡೆಸುವುದೇ ಕಷ್ಟದ ಪರಿಸ್ಥಿತಿಯಾಗಿದೆ. ಈ ನಡುವೆ ಕಳ್ಳತನಗಳು ನಡೆಯುವುದು ವ್ಯಾಪಾರಸ್ಥರಿಗೆ ನುಂಗಲಾರದ ತುತ್ತಾಗಿದೆ. ಅಂತಹ ಈ ಸಮಯದಲ್ಲಿ ಬಿಸಿರೋಡಿನ ಹೃದಯ ಭಾಗದಲ್ಲಿರುವ ಗಣೇಶ್ ಮೆಡಿಕಲ್ ಸೆಂಟರ್ ಗೆ ನುಗ್ಗಿದ ಕಳ್ಳರು ಡ್ರವರ್ ನೊಳಗೆ ಇಟ್ಟಿದ್ದ 3 ಸಾವಿರ ನಗದು ಹಣ ಮತ್ತು ಕಂಪ್ಯೂಟರ್ ಮಾನಿಟರ್ ಒಂದನ್ನು ಕಳ್ಳತನ ಮಾಡಿದ್ದು, ಹಾಗೂ ಯೂನಸ್ ಅವರ ಅಂಗಡಿಯಿಂದ ಕ್ಯಾಸ್ ಕೌಂಟರ್ ನೊಳಗೆ ಇದ್ದ 5 ಸಾವಿರ ನಗದು ಮತ್ತು ಸಾವಿರಾರು ರೂ ಬೆಲೆಬಾಳುವ ದಿನಬಳಕೆಯ ವಸ್ತುಗಳನ್ನು ಕಳವು ಮಾಡಿದ ಬಗ್ಗೆ ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ಅಂಗಡಿಯವರ ದೂರಿನಂತೆ ಬಂಟ್ವಾಳ ನಗರ ಠಾಣೆಯ ಪೋಲಿಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು