Wednesday, January 22, 2025
ಪುತ್ತೂರು

ವಿಟ್ಲ: ಗಾಂಜಾ ಸೇವನೆ, ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿ ಅಬ್ದುಲ್ ಅಮ್ರಾಜ್ ಬಂಧನ – ಕಹಳೆ ನ್ಯೂಸ್

ಕನ್ಯಾನ: ಗಾಂಜಾ ಸೇವನೆ ಮಾಡುತ್ತ ಇತರರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯೋರ್ವರನ್ನು ವಿಟ್ಲ ಠಾಣಾ ಪೊಲೀಸರು ಬಂದಿಸಿದ್ದಾರೆ.

ಕನ್ಯಾನ ಪೇಟೆಯ ಶಿರಂಕಲ್ಲು ಕ್ರಾಸ್ ಬಳಿಯ ಬೇಕರಿ ಹಿಂಭಾಗದಲ್ಲಿ ಬೊಬ್ಬೆ ಹೊಡೆಯುವುದನ್ನು ಗಮನಿಸಿದ ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿದಾಗ ಕೈಯಲ್ಲಿ ಮೂವರು ಪ್ಯಾಕೇಟ್ ಹಿಡಿದು ಕುಳಿತಿದ್ದವರನ್ನು ಕಂಡು ಅವರನ್ನು ಹಿಡಿಯಲು ಮುಂದಾಗುತ್ತಿದ್ದಂತೆ ಇಬ್ಬರು ತಪ್ಪಿಸಿಕೊಂಡಿದ್ದು, ಕನ್ಯಾನ ಸಮೀಪದ ಒಡಿಯೂರು ನಿವಾಸಿ ಅಬ್ದುಲ್ ಅಮ್ರಾಜ್ ಯಾನೆ ಅಂಬು (20 ವ.)ರವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ವಿಚಾರಣೆ ನಡೆಸಿದಾಗ ಗಾಂಜಾ ಸೇವನೆ ಮಾಡುತ್ತ ಇತರರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಬಗ್ಗೆ ಆರೋಪಿ ಒಪ್ಪಿಕೊಂಡಿದ್ದಾರೆ. ಬಂಧಿತ ಆರೋಪಿಯ ಬಳಿಯಿಂದ ಸುಮಾರು 180 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆಯಲಾಗಿದ್ದು, ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು