Sunday, November 24, 2024
ಹೆಚ್ಚಿನ ಸುದ್ದಿ

‘ಲೋಹದ ಹಕ್ಕಿಗಳ ಹಾರಾಟ’ ಕಣ್ ತುಂಬಿಕೊಳ್ಳುವ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್ : ‘ಏರ್ ಶೋ’ಗೆ ‘ಸಾರ್ವಜನಿಕ’ರ ಪ್ರವೇಶಕ್ಕೆ ಬ್ರೇಕ್.!? – ಕಹಳೆ ನ್ಯೂಸ್

ಬೆಂಗಳೂರು : ಕೊರೋನಾ ಸೋಂಕಿನ ಭೀತಿಯ ನಡುವೆಯೂ ಏರೋ ಇಂಡಿಯಾ 2021ರ ಕಾರ್ಯಕ್ರಮ ಫೆಬ್ರವರಿ 3ರಿಂದ 7ರವರೆಗೆ ನಿಗದಿಯಾಗಿತ್ತು. ಇಂತಹ ಲೋಹದ ಹಕ್ಕಿಗಳ ಹಾರಾಟಕ್ಕೂ ಕೊರೋನಾ ಸೋಂಕಿನ ಭೀತಿ ಎದುರಾಗಿದೆ. ಹೀಗಾಗಿ ಸಾರ್ವಜನಿಕರ ಪ್ರವೇಶಕ್ಕೆ ಬ್ರೇಕ್ ಹಾಕಲಾಗಿದೆ. ಈ ಮೂಲಕ ಲೋಹದ ಹಕ್ಕಿಗಳ ಹಾರಾಟ ಕಣ್ ತುಂಬಿಕೊಳ್ಳುವ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್ ನೀಡಿದೆ.

ಈ ಕುರಿತಂತೆ ಕೇಂದ್ರ ರಕ್ಷಣಾ ಇಲಾಖೆ ಮಾಹಿತಿ ನೀಡಿದ್ದು, ಕೊರೋನಾ ಸೋಂಕಿನ ಕಾರಣದಿಂದಾಗಿ ಏರ್ ಶೋ ಗೆ ಸೀಮಿತ ಪ್ರವೇಶಾವಕಾಶ ನೀಡುವಂತೆ ಆರೋಗ್ಯ ಇಲಾಖೆ ಸೂಚಿಸಿದೆ. ಅಲ್ಲದೇ ಇತರರಿಗೆ ವರ್ಚುವಲ್ ಶೋ ಮೂಲಕ ವೀಕ್ಷಣೆಗೆ ಅವಕಾಶ ನೀಡುವಂತೆ ಸಲಹೆ ಮಾಡಿದೆ. ಇದರಿಂದಾಗಿ ಫೆಬ್ರವರಿ 3ರಿಂದ 7ರವರೆಗೆ ಯಲಹಂಕದ ವಾಯುನೆಲೆಯಲ್ಲಿ ನಿರ್ಧರಿಸಿರುವಂತ 13ನೇ ಅಂತರಾಷ್ಟ್ರೀಯ ಏರೋ ಇಂಡಿಯಾ 2021ರ ಕಾರ್ಯಕ್ರಮ ನಡೆಸಲು ನಿರ್ಧರಿಸಿದೆ.
ಇದರ ಮಧ್ಯೆ ಜನವರಿ ಹಾಗೂ ಫೆಬ್ರವರಿ ವೇಳೆಗೆ ಕರ್ನಾಟಕದಲ್ಲಿ ಕೊರೋನಾ ಎರಡನೆ ಅಲೆಯ ಅಬ್ಬರ ಶುರುವಾಗಲಿದೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕರ ಪ್ರವೇಶದ ಮೇಲೆ ನಿರ್ಬಂಧ ವಿಧಿಸುವಂತೆಯೂ ಆರೋಗ್ಯ ಇಲಾಖೆ ಸಲಹೆ ಮಾಡಿದೆ. ಹೀಗಾಗಿ ಜನವರಿ ಅಂತ್ಯಭಾಗದಲ್ಲಿ ಮತ್ತೊಮ್ಮೆ ಸಭೆ ನಡೆಸಿ, ಅಂತಿಮ ನಿರ್ಣಯ ಕೈಗೊಳ್ಳಲಾಗುತ್ತದೆ. ಪಾಸ್ ವಿತರಣೆ ಸಂದರ್ಭದಲ್ಲಿ ವರ್ಚೂವಲ್ ಎಂದು ನಮೂದಿಸಿ ನೀಡುವ ಕುರಿತಂತೆ ಚಿಂತನೆ ನಡೆಸಲಾಗುತ್ತದೆ ಎಂದು ತಿಳಿಸಿದೆ. ಹೀಗಾಗಿ ಸಾರ್ವಜನಿಕರು ಏರ್ ಶೋ ವೀಕ್ಷಣೆಗೆ ಅವಕಾಶ ನೀಡೋದಕ್ಕೆ ಬ್ರೇಕ್ ಹಾಕಲಿದೆ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು