ಬಂಟ್ವಾಳ: ಮದುವೆ ಹಾಲ್ ಗಳಲ್ಲಿ ಮಕ್ಕಳ ಮತ್ತು ಮಹಿಳೆಯರ ಕುತ್ತಿಗೆಯಿಂದ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದ ಮಹಿಳೆಯೋರ್ವಳನ್ನು ಬಂಟ್ವಾಳ ನಗರ ಠಾಣಾ ಪೋಲಿಸ್ ರು ಬಂಧಿಸಿದ್ದಾರೆ.
ಆರೋಪಿ ಮುಡಿಪು ನಿವಾಸಿ ಸಿದ್ದೀಕ್ ಎಂಬವರ ಪತ್ನಿ ಫಾತಿಮಾ ಸಹಿನಾಜ್ ಎಂದು ತಿಳಿದು ಬಂದಿದೆ. ಇವರು ಮದುವೆ ಸಮಾರಂಭಗಳಲ್ಲಿ ಮದುವೆ ಹಾಲ್ ಗಳಲ್ಲಿ ಬ್ಯಾಗ್ ನಿಂದ ಮತ್ತು ಮಕ್ಕಳ, ಮಹಿಳೆಯರ, ಕುತ್ತಿಗೆಗೆ ಕೈ ಹಾಕಿ ಬಂಗಾರಗಳನ್ನು ಕಳವು ಮಾಡುತ್ತಿದ್ದರು. ಇವರು ಮದುವೆ ಹಾಲ್ ಗಳಲ್ಲಿರುವ ಸಿ.ಸಿ ಟಿವಿ ಪೂಟೇಜ್ ನಲ್ಲಿ ಕಳ್ಳತನ ಮಾಡುವ ದೃಶ್ಯ ಸೆರೆಯಾಗಿದೆ. ಈ ಬಗ್ಗೆ ಹಾಲ್ ಗಳ ಮಾಲಕರು ಬಂಟ್ವಾಳ ನಗರ ಮತ್ತು ಗ್ರಾಮಾಂತರ ಪೋಲಿಸ್ ಠಾಣೆಗೆ ದೂರನ್ನು ನೀಡಿರುತ್ತಾರೆ. ಇವಳು ನವೆಂಬರ್ 29 ರಂದು ಎಸ್.ಎಸ್. ಅಡಿಟೋರಿಯಂ ಹಾಲ್ ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಅಬುಬಕ್ಕರ್ ಸಿದ್ಧೀಕ್ ಎಂಬವರ ಹೆಣ್ಮಗಳ 14 ಗ್ರಾಂ ಚಿನ್ನವನ್ನು ಕಳವು ಮಾಡಿದ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಸ್ಟೇಷನ್ ನಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿತ್ತು. ವಿಚಾರಣೆ ವೇಳೆ ಫಾತಿಮಾ ಅವರು ಕಳೆದ 10 ವರ್ಷಗಳಿಂದ ಇದೇ ದಂದೆಯಲ್ಲಿ ತೊಡಗಿದ್ದು,ಎಸ್. ಎಸ್ ಮಹಲ್ ನಲ್ಲಿ ಮದುವೆ ಹಾಲ್ ನಲ್ಲಿ ಮೂರು ಬಾರಿ ಕಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾಳೆ. ಹಾಗೆಯೇ ಯಶಸ್ವಿ ಹಾಲ್ ಫರಂಗಿಪೇಟೆ, ತೊಕ್ಕೊಟ್ಟು ಯುನಿಟಿ, ತಲಪಾಡಿ ಖಜನಾ ಸೇರಿದಂತೆ ಇತರ ಹಲವು ಕಡೆಗಳಲ್ಲಿ ಕಳವು ಮಾಡಿದ್ದು, ಕಳವು ಮಾಡಿದ ಚಿನ್ನಾಭರಣಗಳನ್ನು ಚಿನ್ನದ ಅಂಗಡಿಗೆ ನೀಡಿ ಹೊಸ ರೂಪ ಮಾಡಿಸಿದ ಸುಮಾರು 234 ಗ್ರಾಂ ಚಿನ್ನವನ್ನು ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ. ಉಳಿದಂತೆ ಮಾರಾಟ ಮಾಡಿದ ಹಣವನ್ನು ಬ್ಯಾಂಕ್ ನಲ್ಲಿ ಇಟ್ಟಿರುವುದಾಗಿ ತಿಳಿಸಿದ್ದಾಳೆ. ಕಳವು ಆರೋಪಿ ಮಹಿಳೆಯನ್ನು ಬಂಧಿಸಿದ ಪೋಲಿಸರು ನ್ಯಾಯಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಎಸ್.ಪಿ.ಲಕ್ಷ್ಮೀ ಪ್ರಸಾದ್ ಅವರ ನಿರ್ದೇಶನದಂತೆ ಬಂಟ್ವಾಳ ಡಿ.ವೈ.ಎಸ್.ಪಿ ಡಿಸೋಜ ಮತ್ತು ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಮಾರ್ಗದರ್ಶನದಲ್ಲಿ ಬಂಟ್ವಾಳ ನಗರ ಠಾಣಾ ಎಸ್.ಐ ಅವಿನಾಶ್ ಪ್ರಕರಣ ದಾಖಲಿಸಿಕೊಂಡು ಅಪರಾಧ ವಿಭಾಗದ ಎಸ್.ಐ ಕಲೈಮಾರ್ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಹಾಗೆ ಕಾರ್ಯಚರಣೆಯಲ್ಲಿ ಅಪರಾಧ ವಿಭಾಗದ ಸಿಬ್ಬಂದಿಗಳು ಭಾಗವಹಿಸಿದ್ದರು.