Wednesday, January 22, 2025
ಹೆಚ್ಚಿನ ಸುದ್ದಿ

ಅಳಿಕೆಯಲ್ಲಿ ಕೆರೆಗೆ ಹಾರಿ ಆತ್ಮಹತ್ಯೆ ; ವಿಟ್ಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು- ಕಹಳೆ ನ್ಯೂಸ್

ವಿಟ್ಲ: ಅಳಿಕೆಯಲ್ಲಿ ಅಡುಗೆ ಸಹಾಯಕನೋರ್ವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೃತಪಟ್ಟವರು ಕಾಸರಗೋಡು ಜಿಲ್ಲೆಯ ಬೆದ್ರಡ್ಕ ನಿವಾಸಿ 55 ವರ್ಷದ ನಾರಾಯಣ ಪಟಾಲಿ ಎಂದು ತಿಳಿದು ಬಂದಿದೆ.ಇವರು ಸ್ಥಳೀಯ ಹಾಸ್ಟೆಲ್ ನಲ್ಲಿ ಅಡುಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದು, ಗುರುವಾರ ತಡರಾತ್ರಿಯಿಂದ ನಾಪತ್ತೆಯಾಗಿದ್ದರು. ಅವರನ್ನು ಹುಡುಕಾಡಿದಾಗ ಕೆರೆಯ ಬಳಿ ಅವರ ಚಪ್ಪಲಿ ಪತ್ತೆಯಾಗಿತ್ತು. ಕೆರೆಯಲ್ಲಿ ಸುಮಾರು ಇಪ್ಪತ್ತೆರಡು ಅಡಿಗಿಂತಲೂ ಅಧಿಕ ನೀರು ತುಂಬಿಕೊಂಡಿದ್ದು, ಫ್ರೆಂಡ್ಸ್ ವಿಟ್ಲ ಸಂಘಟನೆಯ ಮುರಳೀಧರ ಮತ್ತು ಹೈದರಾಲಿ ಮೇಗಿನಪೇಟೆ ನೇತೃತ್ವದ ಮುಳುಗು ತಜ್ಞರ ತಂಡ ಒಂದು ಗಂಟೆ ಕಾಲ‌ ಕಾರ್ಯಾಚರಣೆ ನಡೆಸಿ ಮೃತಶರೀರವನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಕಳೆದ 25 ವರ್ಷಗಳಿಂದ ಮೂರ್ಚೆ ರೋಗದಿಂದ ಬಳಲುತ್ತಿದ್ದು, ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಿಟ್ಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು