Wednesday, January 22, 2025
ಬಂಟ್ವಾಳ

ಫರಂಗಿಪೇಟೆಯಲ್ಲಿ ಭೀಕರ ಅಪಘಾತ; ವಿಟ್ಲದ ವ್ಯಕ್ತಿ ಕಾಂತಡ್ಕ ಶಂಕರನಾರಾಯಣ ಭಟ್ ಸಾವು- ಕಹಳೆ ನ್ಯೂಸ್

ಬಂಟ್ವಾಳ: ಬಂಟ್ವಾಳ ತಾಲೂಕಿನ ಫರಂಗಿಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಸ್ವಿಡ್ ಆಗಿ ವ್ಯಕ್ತಿಯೋರ್ವರು ಸಾವನ್ನಪ್ಪಿದ ಘಟನೆ ಗುರುವಾರ ಇಳಿಸಂಜೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇವರು ವಿಟ್ಲದ ಜನಪ್ರಿಯ ಬಾಣಸಿಗರಾದ 55 ವರ್ಷದ ಕಾಂತಡ್ಕ ಶಂಕರನಾರಾಯಣ ಭಟ್ ಎಂದು ತಿಳಿದು ಬಂದಿದೆ.ಈ ಘಟನೆ ಮಂಗಳೂರು ಕಡೆಯಿಂದ ಬೈಕ್ ನಲ್ಲಿ ವಿಟ್ಲ ಕಡೆಗೆ ಆಗಮಿಸುತ್ತಿದ್ದ ಅವರ ಬೈಕ್ ಫರಂಗಿಪೇಟೆಯ ಮೀನು ಮಾರುಕಟ್ಟೆಯ ಬಳಿ ಪಲ್ಟಿಯಾಗಿ‌ ಅಪಘಾತ ಸಂಭವಿಸಿದ್ದು, ಸಾವನ್ನಪ್ಪಿದ್ದಾರೆ. ಎಂದು ತಿಳಿದು ಬಂದಿರುತ್ತದೆ. ಈ ಬಗ್ಗೆ ಬಂಟ್ವಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಅವರು ಸಾವನ್ನಪ್ಪಿದರು. ಹಾಗೆಯೇ ಅವರು ಪತ್ನಿ, ಪುತ್ರ, ಮತ್ತು ಪುತ್ರಿಯನ್ನು ಹೊಂದಿದ್ದರು. ವಿಟ್ಲ ಪರಿಸರದ ಪ್ರಖ್ಯಾತ ಬಾಣಸಿಗರಾಗಿದ್ದ ಅವರು, ಹಲವಾರು ದೇವಸ್ಥಾನಗಳ ದೊಡ್ಡ ಪ್ರಮಾಣದ ಅಡುಗೆಯನ್ನು ಮಾಡುವುದರಲ್ಲಿ ನಿಷ್ಣಾತರಾಗಿದ್ದರು, ಇವರು ವಿಟ್ಲ ಸಮೀಪದ ನೆತ್ತರಕೆರೆ ಎಂಬಲ್ಲಿನ ಪಾಂಚಜನ್ಯ ಲೇಔಟ್ ನಲ್ಲಿ ವಾಸವಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು