Wednesday, January 22, 2025
ಹೆಚ್ಚಿನ ಸುದ್ದಿ

ಡಿಸೆಂಬರ್ 16ರಂದು ಮೆಸ್ಕಾಂ ಇಲಾಖೆಯ ಗ್ರಾಹಕರ ಮೇಲಿನ ದೌರ್ಜನ್ಯ ಮತ್ತು ಕಾನೂನು ವಿರೋಧಿ ವರ್ತನೆಯ ವಿರುದ್ಧ ವಿಟ್ಲ ಮೆಸ್ಕಾಂ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ-ಕಹಳೆ ನ್ಯೂಸ್

ವಿಟ್ಲ : ಡಿಸೆಂಬರ್ 16ರಂದು ಮೆಸ್ಕಾಂ ಇಲಾಖೆಯ ಗ್ರಾಹಕರ ಮೇಲಿನ ದೌರ್ಜನ್ಯ ಮತ್ತು ಕಾನೂನು ವಿರೋಧಿ ವರ್ತನೆಯ ವಿರುದ್ಧ ವಿಟ್ಲ ಮೆಸ್ಕಾಂ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಸುರೇಶ್ ಭಟ್ ಕೊಜಂಬೆ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಸಮರ್ಪಕ ವಿದ್ಯುತ್ ಪೂರೈಕೆ, ಹೊಸ ಸಂಪರ್ಕಕ್ಕೆ ರೈತರ ಮೇಲೆ ಶೋಷಣೆ, ವಿದ್ಯುತ್ ತೊಂದರೆ ಸರಿಪಡಿಸುವಲ್ಲಿ ವಿಳಂಬ ನೀತಿ ಸೇರಿ ಹಲವು ರೈತರ ಪ್ರಶ್ನೆಗೆ ದಾಖಲೆಗಳ ಸಹಿತವಾಗಿ ಬಹಿರಂಗ ಉತ್ತರವನ್ನು ಪ್ರತಿಭಟನೆಯ ಸಂದರ್ಭದಲ್ಲಿ ಅಧಿಕಾರಿಗಳು ನೀಡಬೇಕು. ನೀಡಿದ ಮಾಹಿತಿಯನ್ನು ಜಾರಿಗೆ ತರುವ ಜವಾಬ್ದಾರಿಯುತ ಅಧಿಕಾರಿಗಳು ಬರದೇ ಹೋದಲ್ಲಿ ಮೆಸ್ಕಾಂ ಕಛೇರಿಗೆ ಬೀಗ ಜಡಿದು ಉಗ್ರ ಸ್ವರೂಪದ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ವಿಟ್ಲ ಪ್ರೆಸ್ ಕ್ಲಬ್ ನಲ್ಲಿ ಸುದ್ಧಿಗೋಷ್ಠಿ ನಡೆಸಿ ಎಚ್ಚರಿಸಿದರು.ಕರ್ನಾಟಕ ವಿದ್ಯುತ್ ಪ್ರಸರಣ ನಿಗಮಕ್ಕೆ ಗ್ರಾಹಕರ ಬಿಲ್ ಗಳಿಗೆ ಯಾವುದೇ ರೀತಿಯಲ್ಲಿ ಬಡ್ಡಿ ವಿಧಿಸುವ ಹಕ್ಕಿಲ್ಲವಾದರೂ ಪೈನಾನ್ಸ್ ರೀತಿಯಲ್ಲಿ ಬಡ್ಡಿ ವಿಧಿಸಲಾಗುತ್ತದೆ. ಬಿಲ್ ಪಾವತಿಸದಿದ್ದರೆ ನೋಟೀಸ್ ನೀಡದೆ ಸಂಪರ್ಕ ಕಡಿತ ಮಾಡಲಾಗುತ್ತದೆ. ಹಾಗೂ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ನಿಯಮಗಳನ್ನು ಉಲ್ಲಂಘಿಸಿ ಗ್ರಾಹಕರ ಮೇಲೆ ದೌರ್ಜನ್ಯ ಮಾಡಲಾಗುತ್ತಿದೆ ಎಂದು ಹೇಳಿದರು. ಪ್ರತಿಭಟನೆಯಲ್ಲಿ ಎಲ್ಲಾ ವಿದ್ಯುತ್ ಗ್ರಾಹಕರು ಆಗಮಿಸಿ ಕುಂದು ಕೊರತೆಗಳನ್ನು ನಿವಾರಿಸಿಕೊಳ್ಳಬಹುದಾಗಿದೆ.ಡಿಸೆಂಬರ್ 16ರಂದು ಒಂದು ದಿನದ ಮಟ್ಟಿಗೆ ಗ್ರಾಹಕರು ಮೆಸ್ಕಾಂ ನ ಯಾವುದೇ ಬಿಲ್ ಪಾವತಿ ಮಾಡದೆ ಪ್ರತಿಭಟನೆಗೆ ಸಹಕಾರವನ್ನು ನೀಡಬೇಕೆಂದು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು