Sunday, November 24, 2024
ಹೆಚ್ಚಿನ ಸುದ್ದಿ

ವಿಟ್ಲ:  ಶ್ರೀ ಉಳ್ಳಾಲ್ತಿ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಡಿಸೆಂಬರ್ 16ರಂದು ಕೋವಿಡ್ ನಿಯಾಮಳಿಯಂತೆ ನಡೆಯಲಿದೆ ಕಾಲಾವಧಿ ಕಜಂಬು ಜಾತ್ರೆ; ಕೃಷ್ಣಯ್ಯ ಬಲ್ಲಾಳ್- ಕಹಳೆ ನ್ಯೂಸ್

ವಿಟ್ಲ:  ಶ್ರೀ ಉಳ್ಳಾಲ್ತಿ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಡಿಸೆಂಬರ್ 16ರಂದು ಅನುವಂಶಿಕ ಮೊಕ್ತೇಸರರಾದ ವಿಟ್ಲ ಅರಮನೆಯ ಬಂಗಾರು ಅರಸರ ಮುಂದಾಳತ್ವದಲ್ಲಿ ಕಾಲಾವಧಿ ಕಜಂಬು ಜಾತ್ರೆ ನಡೆಯಲಿದೆ. ಕೋವಿಡ್-19 ಕಾರಣ ಸರ್ಕಾರದ ನಿಯಮಾವಳಿಯಂತೆ ಕಾರ್ಯಕ್ರಮಗಳು ನಡೆಯುತ್ತವೆ ಎಂದು ಕೃಷ್ಣಯ್ಯ ಬಲ್ಲಾಳ್ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಹಾಗೆಯೇ ಡಿಸೆಂಬರ್15 ರಂದು ಧನು ಸಂಕ್ರಮಣದಂದು ಧ್ವಜಾರೋಹಣಗೊಂಡು ಡಿಸೆಂಬರ್ 16 ರಂದು ಕಜಂಬು ಉತ್ಸವ ನಡೆಯಲಿದ್ದು, ಕೊರೋನಾ ಇರುವುದರಿಂದ ಕಜಂಬಿನ ಮಕ್ಕಳನ್ನು ಸ್ನಾನ ಮಾಡಿಸುವ ಬದಲಾಗಿ ದೇವರ ತೀರ್ಥ ಪ್ರೋಕ್ಷಣೆ ಮಾಡಲಾಗುತ್ತದೆ. ಹಾಗೆ ಅಂತರ ಮತ್ತು ವ್ಯವಸ್ಥೆಯ ದೃಷ್ಟಿಯಿಂದ ರಾತ್ರಿ 8.30 ರಿಂದಲೇ ಕಜಂಬಿನ ಧಾರ್ಮಿಕ ಕಾರ್ಯಗಳು ‌ಆರಂಭಗೊಳ್ಳಲಿದ್ದು, ದೇವಸ್ಥಾನದ ಒಳಗೆ ಕುಳಿತುಕೊಳ್ಳಲು ಯಾರಿಗೂ ಅವಕಾಶವಿಲ್ಲ. ಇದಕ್ಕಾಗಿ ದೇವಸ್ಥಾನದ ಮುಂಭಾಗದ ಗದ್ದೆಯಲ್ಲಿ ಚಪ್ಪರದ ವ್ಯವಸ್ಥೆಯನ್ನು ಮಾಡಲಾಗಿದ್ದು, ಡಿಸೆಂಬರ್ 24 ಕೇಪು ಭಂಡಾರ ಕೊಟ್ಟಿಗೆಯಲ್ಲಿ ಮಲರಾಯಿ ಮತ್ತು ಪಿಲಿಚಾಮುಂಡಿ ದೈವಕ್ಕೆ ನೇಮ ನಡೆಯಲಿದೆ ಎಂದು ವಿಟ್ಲ ಪ್ರೆಸ್ ಕ್ಲಬ್‌ ನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ರು.ಕೇಪು ಸುಬ್ರಾಯ ದೇವಸ್ಥಾನದಲ್ಲಿ ಡಿಸೆಂಬರ್ 20 ರಂದು ಷಷ್ಠಿ ಉತ್ಸವ ಮತ್ತು ಬಲಿವಾಡು ಕೂಟ ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ 9.30 ಕ್ಕೆ ಉತ್ಸವ ಬಲಿ, ಕಟ್ಟೆ ಪೂಜೆ, ಹಾಗೂ ಡಿಸೆಂಬರ್ 21 ರಂದು ಬೆಳಿಗ್ಗೆ 9 ಕ್ಕೆ ಉತ್ಸವ ಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಲಿದೆ ಎಂದು ಹೇಳಿದರು. ಕೇಪು ಶ್ರೀ ದುರ್ಗಾಪರಮೇಶ್ವರಿ ಸೇವಾಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ದಂಬೆಕಾನ ಡಿಸೆಂಬರ್ 15 ರಂದು ಬೆಳಿಗ್ಗೆ 10.30 ಕ್ಕೆ ಕೇಪು ಕಲ್ಲಂಗಳ ದ್ವಾರದ ಬಳಿಯಿಂದ ಹಸಿರುವಾಣಿ ಹೊರಕಾಣಿಕೆ ಮೆರವಣಿಗೆ ನಡೆಯಲಿದ್ದು, ಪ್ರಸಾದ ಭೋಜನದ ವ್ಯವಸ್ಥೆಯನ್ನು ಮಾಡಿದೆ.ಹಾಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸಹಕರಿಸಬೇಕೆಂದು ತಿಳಿಸಿದರು. ಮತ್ತು ವಿಟ್ಲ ಅರಮನೆಯ ರಾಜರಾಮ ವರ್ಮ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು