Wednesday, January 22, 2025
ಹೆಚ್ಚಿನ ಸುದ್ದಿ

ಇಂದು ಈ ವರ್ಷದ ಕೊನೆಯ ಸೂರ್ಯ ಗ್ರಹಣ-ಕಹಳೆ ನ್ಯೂಸ್

ಹೊಸದಿಲ್ಲಿ: ಈ ವರ್ಷದ ಕೊನೆಯ ಸೂರ್ಯ ಗ್ರಹಣ ಇಂದು ಸಂಭವಿಸಲಿದೆ. ಗ್ರಹಣದ ಸಂದರ್ಭದಲ್ಲಿ ಸೂರ್ಯನು ಆಂಶಿಕವಾಗಿ ಮುಚ್ಚಿದಂತೆ ಕಾಣುವುದರಿಂದ ಇದನ್ನು ಖಂಡಗ್ರಾಸ ಸೂರ್ಯಗ್ರಹಣ ಎನ್ನುತ್ತಾರೆ.

ಸೂರ್ಯಗ್ರಹಣವು ಭಾರತೀಯ ಕಾಲಮಾನದ ಪ್ರಕಾರ ಡಿ.14ರ ಸಂಜೆ 7 ಗಂಟೆ 3 ನಿಮಿಷಕ್ಕೆ ಆರಂಭವಾಗಿ ಮಧ್ಯರಾತ್ರಿ 12.23 ನಿಮಿಷಕ್ಕೆ ಕೊನೆಗೊಳ್ಳುತ್ತದೆ. ಸಂಜೆ 7 ಗಂಟೆ ಮೂರು ನಿಮಿಷಕ್ಕೆ ಆರಂಭವಾಗುವುದರಿಂದ ಈ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ನೈಋತ್ಯ ಆಫ್ರಿಕಾ, ದಕ್ಷಿಣ ಅಮೆರಿಕ ಹಾಗೂ ಪೆಸಿಫಿಕ್‌ ಮಹಾಸಾಗರದ ಕೆಲವು ಪ್ರದೇಶಗಳ ಜನರು ಸೂರ್ಯ ಗ್ರಹಣ ವೀಕ್ಷಿಸಲು ಸಾಧ್ಯವಾಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

15 ದಿನಗಳಲ್ಲಿ ಚಂದ್ರ-ಸೂರ್ಯ ಗ್ರಹಣ: ಈ ವರ್ಷದ ಮೊದಲ ಸೂರ್ಯ ಗ್ರಹಣ ಜೂನ್‌ 21ರಂದು ಸಂಭವಿಸಿತ್ತು. ಮುಂದಿನ ಸೂರ್ಯ ಗ್ರಹಣವು 2021ರ ಜೂನ್‌ 10ರಂದು ನಡೆಯಲಿದೆ. ಕೋವಿಡ್‌ ಸಾಂಕ್ರಾಮಿಕದ ಈ ವರ್ಷದಲ್ಲಿ ನಾಲ್ಕು ಚಂದ್ರ ಗ್ರಹಣಗಳು ಸಂಭವಿಸಿದೆ. ನ.30ರಂದು 2020ರ ಕೊನೆಯ ಚಂದ್ರ ಗ್ರಹಣವಾಗಿತ್ತು. ಇಂದು ಸೂರ್ಯಗ್ರಹಣ ಸಂಭವಿಸಲಿದ್ದು, 15 ದಿನಗಳೊಳಗೇ ಎರಡು ಗ್ರಹಣಗಳು ಸಂಭವಿಸಲಿರುವುದು ವಿಶೇಷ. ನಾಸಾದ ಪ್ರಕಾರ, ಒಂದು ವರ್ಷದಲ್ಲಿ ಗರಿಷ್ಠ ಐದು ಸೂರ್ಯಗ್ರಹಣಗಳು ಸಂಭವಿಸಬಹುದು(ಕನಿಷ್ಠ 2). ಆದರೆ ಒಂದೇ ವರ್ಷದಲ್ಲಿ ಐದು ಸೂರ್ಯ ಗ್ರಹಣಗಳು ಸಂಭವಿಸಿದ್ದು 1935ರಲ್ಲಿ, ಮತ್ತೆ ಈ ಖಗೋಳ ಘಟನೆ ನಡೆಯುವುದು ಮಾತ್ರ 2206ರಲ್ಲಿ!.