Wednesday, January 22, 2025
ಬಂಟ್ವಾಳ

ಪೊಳಲಿ ದೇವಸ್ಥಾನದಲ್ಲಿ ಸಾರ್ವಜನಿಕರಿಗೆ ಡಿಸೆಂಬರ್ 28 ರಿಂದ ಫೆಬ್ರವರಿ 17ರವರೆಗೆ ದೇವರ ದರ್ಶನ ಇಲ್ಲ- ಕಹಳೆ ನ್ಯೂಸ್

ಬಂಟ್ವಾಳ: ಡಿಸೆಂಬರ್ 28 ರಿಂದ ಫೆಬ್ರವರಿ 17ರವರೆಗೆ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶದ ಅಂಗವಾಗಿ ದೃಡಕಲಶ ಆಗಬೇಕಿರುವ ಕಾರಣದಿಂದ ಸಾರ್ವಜನಿಕರಿಗೆ ದೇವರ ದರ್ಶನ ಇರುವುದಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೊರೋನಾ ಹಿನ್ನೆಲೆ ಬ್ರಹ್ಮಕಲಶೋತ್ಸವ ನಡೆದ ಬಳಿಕ ಜೀರ್ಣೋದ್ಧಾರದ ನಂತರದ ಕಾರ್ಯಗಳು ಆಗಿರಲಿಲ್ಲ, ದೃಡಕಲಶ ಬಾಕಿ ಉಳಿದಿತ್ತು. ಹಾಗಾಗಿ ಪ್ರಸ್ತುತ ಸಾನಿಧ್ಯದಲ್ಲಿ ಸಣ್ಣ ಪುಟ್ಟ ಜೀರ್ಣೋದ್ಧಾರದ ಕೆಲಸ ನಡೆಸಿ, ದೃಡಕಲಶ ಮಾಡಬೇಕಾಗಿದೆ.ಹೀಗಾಗಿ ಈ‌‌ ಸಂದರ್ಭದಲ್ಲಿ ದೇವರ ದರ್ಶನ ಇರುವುದಿಲ್ಲ.ಈ ಅವಧಿಯಲ್ಲಿ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಸೀಮೆಯ ‌ಒಳಗೆ ವಿಶೇಷ ಕಾರ್ಯಕ್ರಮ ಮಾಡುವುದಾದರೆ ದೇವರಲ್ಲಿ ಪ್ರಾರ್ಥಿಸಿ, ಮುಂದುವರಿಸಬೇಕಾಗಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು