ಮಂಗಳೂರು:ಡಿಸೆಂಬರ್ 14ರಂದು ಮಂಗಳೂರು ಹಳೆ ಬಂದರಿನಿಂದ ದ್ವೀಪ ರಾಷ್ಟ್ರ ಮಾಲ್ಡೀವ್ಸ್ಗೆ ಪ್ರಥಮ ಬಾರಿಗೆ ಸರಕು ಸಾಗಾಟ ನೌಕೆ ಹೊರಡಲಿದೆ.
ಕೃಷಿ, ತೋಟಕ್ಕೆ ಗೊಬ್ಬರವಾಗಿ ಬಳಸಲು ತೆಂಗಿನ ಗೆರಟೆ ಹುಡಿ, ತರಕಾರಿ ಹಾಗೂ ಹಣ್ಣು ಹಂಪಲು ಸಾಗಾಟ ಮಾಡಲಿದ್ದು, ಭಾನುವಾರ ಕ್ರೇನ್‌ಗಳ ಮೂಲಕ ಲೋಡಿಂಗ್ ನಡೆಸಲಾಯಿತು. ಕ್ಯಾಪ್ಟನ್ ಕಣ್ಣನ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಕಾತೋರಾಯನ್, ಹರಿದಾಸ್, ಸಗಾಯಂ, ಶ್ರೀನಿವಾಸನ್, ವಿಘ್ನೇಶ್ ಪ್ರಥಮ ಯಾನದಲ್ಲಿ ತೆರಳುತ್ತಿದ್ದಾರೆ. ಹಾಗೆಯೇ ಲಕ್ಷದ್ವೀಪದ ಕಡಂಬತ್ತ್ ಕಾರ್‌ಗೆ ಸೇರಿದ ಎಂಎಸ್‌ವಿ ನೂರ್ ಎ ಅಲ್ ಕದರಿ ಹೆಸರಿನ ನೌಕೆಯನ್ನು ಚರಣ್‌ದಾಸ್ ವಿ. ಕರ್ಕೇರ ಬಾಡಿಗೆಗೆ ಪಡೆದುಕೊಂಡು, ಸಾಮಾನು, ಸರಂಜಾಮು ಸಾಗಾಟ ಮಾಡುತ್ತಿದ್ದಾರೆ. ಮತ್ತು ನೌಕೆಯನ್ನು ಮಾಸಿಕ 5 ಲಕ್ಷ ರೂ. ಬಾಡಿಗೆಗೆ ಪಡೆದುಕೊಂಡಿದ್ದು, ತಿಂಗಳಿಗೆ ಎರಡು ಟ್ರಿಪ್ ಮಾಡಲಿದೆ. ಹಾಗೆ ಸೋಮವಾರ ಬೆಳಗ್ಗೆ ನದಿ ನೀರು ಉಬ್ಬರ ಹೆಚ್ಚಾದಾಗ ಹೊರಟು, 4-5 ದಿನಗಳಲ್ಲಿ ತಲುಪಿ, ಮಾಲ್ಡೀವ್ಸ್ ಜೆಟ್ಟಿಯಲ್ಲಿ ಅನ್‌ಲೋಡ್ ಮಾಡಿ, ಮರಳಿ ಬರಲಿದ್ದು, ಹೊಸ ಸಾಹಸಕ್ಕೆ ಕೈ ಹಾಕಿದ್ದೇವೆ ಎಂದು ಚರಣ್‌ದಾಸ್ ಹೇಳಿದರು.