Wednesday, January 22, 2025
ಹೆಚ್ಚಿನ ಸುದ್ದಿ

ಶಬರಿಮಲೆ ಭಕ್ತರ ಸಂಖ್ಯೆಯನ್ನು ಹೆಚ್ಚಿಸುವಂತೆ ಹೈಕೋರ್ಟ್ ಗೆ ಮಾಹಿತಿ ನೀಡಿದ ‌ಕೇರಳ ಸರ್ಕಾರ-ಕಹಳೆ ನ್ಯೂಸ್

ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಭಕ್ತರ ಪ್ರವೇಶದ ಸಂಖ್ಯೆಯನ್ನು ಹೆಚ್ಚಿಸಲು ‌ನಿರ್ಧಾರಿಸಿದೆ ಎಂದು ಕೇರಳ ಸರ್ಕಾರವು ಹೈಕೋರ್ಟ್ ಗೆ ಮಾಹಿತಿ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಾರ್ಷಿಕ ಮಕರವಿಳಕ್ಕು ಅವಧಿಯಲ್ಲಿ ಶಬರಿಮಲೆ ಯಾತ್ರೆಗೆ ತೆರಳಲು ಭಕ್ತರು ತುದಿಗಾಲಲ್ಲಿ ನಿಂತಿದ್ದಾರೆ.ಕೊರೋನಾ ವೈರಸ್ ಸೋಂಕಿನ ಭೀತಿ ಅನೇಕ ಕಠಿಣ ನಿಯಮಗಳ ನಡುವೆಯೂ ಭಕ್ತರ ಉತ್ಸವ ಕಡಿಮೆಯಾಗಿಲ್ಲ. ಆದರೆ ಭಕ್ತರಿಗೆ ಗುಂಪು ‌ಗುಂಪಾಗಿ ತೆರಳಲು ಅವಕಾಶ ನೀಡುತ್ತಿಲ್ಲ. ಆರಂಭದಲ್ಲಿ ವಾರದ ದಿನಗಳಲ್ಲಿ 1000 ಹಾಗೂ ವಾರಾಂತ್ಯ ಮತ್ತು ರಜಾ ದಿನಗಳಲ್ಲಿ 2000 ಭಕ್ತರ ಪ್ರವೇಶಕ್ಕೆ ಇದ್ದ‌‌ ಮಿತಿಯನ್ನು ಕೆಲವು ದಿನಗಳ ಹಿಂದೆಯಷ್ಟೇ ಮತ್ತೆ ಒಂದು ಸಾವಿರದಷ್ಟು ಹೆಚ್ಚಿಸಲಾಗಿತ್ತು. ಆದರೆ ಮಂಡಲ- ಮಕರವಿಳಕ್ಕು, ಸಂದರ್ಭದಲ್ಲಿ ಶಬರಿಮಲೆ ಸ್ವಾಮಿ ದರ್ಶನಕ್ಕಾಗಿ ವೆಬ್ ಸೈಟ್ ನಲ್ಲಿ ನೊಂದಣೆ ಮಾಡಿಕೊಂಡ 40 ಶೇ. ಭಕ್ತರಿಗೆ ಇನ್ನೂ ತೆರಳಲು ಅವಕಾಶ ಸಿಕ್ಕಿಲ್ಲ. ಈ ಕಾರಣದಿಂದ ಭಕ್ತರ ಸಂಖ್ಯೆಯ ಮಿತಿಯನ್ನು ಹೆಚ್ಚಿಸಲು ಸರ್ಕಾರ ಮುಂದಾಗಿದೆ ಎಂದು ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು