Wednesday, January 22, 2025
ಸುದ್ದಿ

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಖಾಸಗಿ ಶಾಲೆ ‌ಸಿಬ್ಬಂದಿ ಅಮಾನತು-ಕಹಳೆ ನ್ಯೂಸ್

ಮಂಗಳೂರು: ಖಾಸಗಿ ಶಾಲೆ ಸಿಬ್ಬಂದಿಯೊಬ್ಬ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಡಿಸೆಂಬರ್ 10 ರಂದು ಸುಳ್ಯ ತಾಲೂಕಿನಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇವರು ಸುಳ್ಯ ತಾಲೂಕಿನ ದೇವಚಲ್ಲ ಗ್ರಾಮದ ಅನಿಲ್ ಎಂದು ತಿಳಿದು ಬಂದಿದೆ. ಇವರು ಬಾಲಕಿಗೆ ಹೊಸ ಬೈಸಿಕಲ್ ತಂದು ಕೊಡುವ ಭರವಸೆ ನೀಡಿ, ಬೈಸಿಕಲ್ ‌ತುಳಿಯುವುದು ಹೇಗೆ ಎಂದು ಹೇಳಿಕೊಡುವುದಾಗಿ ತಿಳಿಸಿ ಲೈಂಗಿಕ ನೀಡಿದ್ದಾನೆ ಎಂದು ಸುಬ್ರಹ್ಮಣ್ಯ ಪೋಲಿಸರು ತಿಳಿಸಿದ್ದಾರೆ. ಅನಿಲ್ ಯೆಲಿಮಲೆಯಲ್ಲಿರುವ ಖಾಸಗಿ ಶಾಲೆಯಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದಾನೆ. ಇತ ಬಾಲಕಿಯ ತಂದೆಯ ಸೇಹ್ನಿತರಾಗಿದ್ದಾರೆ. ಮನೆಗೆ ಬಂದ ನಂತರ ಬಾಲಕಿ ತನ್ನ ಪೋಷಕರಿಗೆ ವಿಷಯ ತಿಳಿಸಿದ್ದಾಳೆ. ನಂತರ ಪೋಷಕರು ಶಾಲಾ ಆಡಳಿತ ಮಂಡಳಿಗೆ ವಿಷಯ ತಿಳಿಸಿದ್ದಾರೆ. ಬಾಲಕಿಯ ಪೋಷಕರು ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂಬುದನ್ನು ತಿಳಿದ ಶಾಲಾ ಆಡಳಿತ ಮಂಡಳಿ ಅನಿಲ್ ನನ್ನು ಅಮಾನತು ಮಾಡಿದೆ. ಇದೇ ವೇಳೆ ಬಾಲಕಿ ತಾಯಿ ಸುಬ್ರಹ್ಮಣ್ಯ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 2012ರ ಪೋಸ್ಕೋ ಕಾಯಿದೆಯಡಿ ದೂರು ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು