Wednesday, January 22, 2025
ಸುಬ್ರಹ್ಮಣ್ಯ

ಚಂಪಾ ಷಷ್ಟಿ ಉತ್ಸವ : ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಅಂತರ್ ರಾಜ್ಯ, ಅಂತರ್ ಜಿಲ್ಲಾ ಭಕ್ತರ ನಿರ್ಭಂಧ – ಕಹಳೆ ನ್ಯೂಸ್

ಸುಬ್ರಹ್ಮಣ್ಯ: ಸುಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ ಜಾತ್ರಾ ಮಹೋತ್ಸವದಲ್ಲಿ ರಥೋತ್ಸವದ ಹಿನ್ನೆಲೆಯಲ್ಲಿ ಕೋವಿಡ್‌ 19 ಮುಂಜಾಗ್ರತಾ ಕ್ರಮವಾಗಿ ಸೇವೆಗಳಿಗೆ ಮುಂಗಡ ನೋಂದಾಯಿಸಿಕೊಂಡಿರುವ ಭಕ್ತಾದಿಗಳನ್ನು ಹೊರತುಪಡಿಸಿ, ಡಿ.17ರಿಂದ ಡಿ.20ರವರೆಗೆ ಎಲ್ಲಾ ಅಂತರ್‌ ರಾಜ್ಯ ಹಾಗೂ ಅಂತರ್‌ ಜಿಲ್ಲಾ ಭಕ್ತರಿಗೆ ನಿರ್ಬಂಧ ಹೇರಲಾಗಿದೆ.

ದ.ಕ. ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ಅವರು ಡಿ.14ರಂದು ಆದೇಶ ಹೊರಡಿಸಿದ್ದಾರೆ. ದೇವಳದ ಆಡಳಿತಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯಧಿಕಾರಿಗಳ ಉಲ್ಲೇಖದಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಕೋವಿಡ್‌ ನಿಯಮ ಪಾಲನೆ ಮಾಡುವ ನೆಲೆಯಲ್ಲಿ ಚಂಪಾಷಷ್ಠಿ ಮಹೋತ್ಸವದ ಸಂದರ್ಭ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಗಳು, ಅಂತರ್‌ ಜಿಲ್ಲೆ ಹಾಗೂ ಅಂತರ್‌ ರಾಜ್ಯದ ಸಾರ್ವಜನಿಕರು ಹಾಗೂ ಭಕ್ತಾಧಿಗಳ ಆಗಮನವನ್ನು ಡಿ.17ರಿಂದ ಡಿ.20ರ ವರೆಗೆ ನಿಷೇದಿಸಿ ಆದೇಶ ಹೊರಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು