Sunday, January 19, 2025
ಬೆಳ್ತಂಗಡಿ

ಬಂದಾರು ಪಂಚಾಯತ್ ವ್ಯಾಪ್ತಿಯ ಮೊಗ್ರು ಗ್ರಾಮದ 1ನೇ ಮುಗೇರಡ್ಕ ವಾರ್ಡ್‍ನಿಂದ ಸಾಮಾನ್ಯ ಅಭ್ಯರ್ಥಿಯಾಗಿ ಕಣಕ್ಕಿಳಿದ ಬಾಲಕೃಷ್ಣ ಗೌಡ- ಕಹಳೆ ನ್ಯೂಸ್

ಬಂದಾರು:ರಾಜ್ಯದಲ್ಲಿ ಗ್ರಾ.ಪಂ. ಚುನಾವಣೆಯ ಕಾವು ಶುರುವಾಗಿದ್ದು, ಈಗಾಗ್ಲೇ ಹಲವಾರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಅದರಂತೆ, ಬಂದಾರು ಪಂಚಾಯತ್ ವ್ಯಾಪ್ತಿಯ ಮೊಗ್ರು ಗ್ರಾಮದ 1ನೇ ಮುಗೇರಡ್ಕ ವಾರ್ಡ್ ನಿಂದ ಬಿಜೆಪಿ ಬೆಂಬಲಿತ ಸಾಮಾನ್ಯ ಅಭ್ಯರ್ಥಿಯಾಗಿ, ಕಣಿಯೂರು ಮಹಾ ಶಕ್ತಿಕೇಂದ್ರದ ಪ್ರಧಾನ ಕಾರ್ಯದರ್ಶಿ ಹಾಗೂ ತಾಲೂಕು ಸಾಮಾಜಿಕ ಜಾಲತಾಣ ಪ್ರಕೋಷ್ಟದ ಸಹ ಸಂಚಾಲಕರಾದ ಬಾಲಕೃಷ್ಣ ಗೌಡ ಎಂ. ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಯಾಗಿ ಗಂಗಾಧರ ಪೂಜಾರಿ ಇವರು ನಾಮಪತ್ರ ಸಲ್ಲಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ಭಾಗಿಯಾಗುತ್ತಾ ತಮ್ಮ ಗ್ರಾಮದಲ್ಲಿ ಗುರುತಿಸಿಕೊಂಡಿರುವ ಇವರು, ತಮ್ಮ ಗ್ರಾಮದ ಜನರ ಕಷ್ಟಗಳನ್ನು ಆಲಿಸಿ ಅವರಿಗೆ ತತ್‍ಕ್ಷಣದಲ್ಲಿ ಸೂಕ್ತವಾದ ಸ್ಪಂದನೆ ನೀಡುವ ಗುಣವನ್ನು ಹೊಂದಿದ್ದಾರೆ. ಗ್ರಾಮ ಪಂಚಾಯತಿ ಸದಸ್ಯರಾಗುವ ಮೂಲಕ ಇನ್ನಷ್ಟು ಜನಸೇವೆಯನ್ನು ಮಾಡುವ ತುಡಿತದಲ್ಲಿರುವ ಇವರು ಸಂಘಟನಾತ್ಮಕವಾಗಿ ಊರನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಉದ್ದೇಶವನ್ನಿಟ್ಟುಕೊಂಡು ಚುನಾವಣಾ ಕಣಕ್ಕಳಿದಿದ್ದಾರೆ. ಇವರಿಬ್ಬರ ನಾಮಪತ್ರ ಸಲ್ಲಿಕೆಯ ವೇಳೆ, ತಾಪಂ ಸದಸ್ಯರಾದ ಕೃಷ್ಣಯ್ಯ ಆಚಾರ್ಯ, ಮಹಾಬಲ ಗೌಡ, ಶೀಲಾವತಿ ಬಾಬು ಗೌಡ, ಜಯಾನಂದ ಕಲ್ಲಾಪ್ಪು, ಅಶೋಕ್ ಭಟ್, ರಮೇಶ್ ನೆಕ್ಕರಾಜೇ, ನೇಮಿಚಂದ್ರ, ಕೇಶವ ಬನತಕೋಡಿ, ಶೀನಪ್ಪ ನೆಕ್ಕರಾಜೇ,ಹಾಗೂ ಹಲವಾರು ಪಕ್ಷದ ಹಿರಿಯ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು