ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧನುರ್ಮಾಸ ಪೂಜೆ ಇಂದಿನಿಂದ ಆರಂಭ ; ವೇದ ಸಂವರ್ಧನ ಪ್ರತಿಷ್ಠಾನದ ನೇತೃತ್ವದಲ್ಲಿ ಒಂದು ತಿಂಗಳುಗಳ ಕಾಲ ನಡೆಯುವ ವೇದ ಹಾಗೂ ರುದ್ರ ಪಾರಾಯಣಕ್ಕೆ ಚಾಲನೆ – ಕಹಳೆ ನ್ಯೂಸ್
ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮುಂದಿನ ಒಂದು ತಿಂಗಳು ನಡೆಯುವ ಧನುರ್ಮಾಸ ಪೂಜೆಯು ಡಿ.16ರಂದು ಆರಂಭಗೊಂಡಿದೆ.
ಬೆಳಿಗ್ಗೆ ಗಂಟೆ 5.30ಕ್ಕೆ ಧನುರ್ಮಾಸ ಪೂಜೆ ನಡೆಯಿತು. ಬಳಿಕ ಶ್ರೀ ದೇವರ ನಿತ್ಯ ಬಲಿ ಉತ್ಸವ ನಡೆಯಿತು. ದೇವಳದ ಪ್ರಧಾನ ಅರ್ಚಕ ಎ ವಸಂತ ಕೆದಿಲಾಯ ಅವರು ವೈದಿಕ ಕಾರ್ಯಕ್ರಮ ನೆರವೇರಿಸಿದರು.
ವೇದ ಸಂವರ್ಧನ ಪ್ರತಿಷ್ಠಾನದ ನೇತೃತ್ವದಲ್ಲಿ ಒಂದು ತಿಂಗಳು ನಸುಕಿನ ನಡೆಯುವ ವೇದ ಮತ್ತು ರುದ್ರ ಪಾರಾಯಣ ವೈದಿಕರ ಸಹಯೋಗದೊಂದಿಗೆ ನಡೆಯಿತು. ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ಸೇರಿದಂತೆ ದೇವಳ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ಸುಧಾಕರ್ ಶೆಟ್ಟಿ, ರಾಜ್ಯ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಎನ್.ಕೆ.ಜಗನ್ನಿವಾಸ ರಾವ್, ನಗರಸಭೆ ಸದಸ್ಯ, ಬಿಜೆಪಿ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಖ್ಯಾತ ವೈದ್ಯ ಡಾ. ರವಿನಾರಾಯಣ್ ಸಿ., ಪಡುಮಲೆ ಶ್ರೀ ಕ್ಷೇತ್ರ ಟ್ರಸ್ಟ್‌ನ ಶ್ರೀಧರ್ ಪಟ್ಲ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.