Sunday, January 19, 2025
ಹೆಚ್ಚಿನ ಸುದ್ದಿ

ಬಜತ್ತೂರು ಗ್ರಾಮಸ್ಥರಿಂದ ಗ್ರಾಮ ಪಂಚಾಯತಿ ಚುನಾವಣೆ ಬಹಿಷ್ಕಾರ-ಕಹಳೆ ನ್ಯೂಸ್

ಬಜತ್ತೂರು: ಬಜತ್ತೂರು‌ ಗ್ರಾಮದಲ್ಲಿ ಪಂಚಾಯಿತಿ ಸದಸ್ಯರು ಹಾಗೂ ಅಧಿಕಾರಿಗಳು ಕಳೆದ 15 ವರ್ಷಗಳಿಂದ ರೆಂಜಾಳ‌, ಸುಳ್ಯ, ಜಾನಪಾಲು ರಸ್ತೆಯನ್ನು ದುರಸ್ತಿಗೊಳಿಸದೆ, ಕೊಳಚೆ ನೀರಿನ ಸಮಸ್ಯೆಯನ್ನು ಕಡೆಗಣಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದರಿಂದ ಬೇಸತ್ತ ಗ್ರಾಮಸ್ಥರು ಚುನಾವಣೆ ಬಹಿಷ್ಕಾರ ಮಾಡಲು ನಿರ್ಧರಿಸಿದ್ದಾರೆ. ಹಾಗೆಯೇ ರೆಂಜಾಳ, ಸುಳ್ಯ, ಬೆದ್ರೋಡಿ, ಜಾನಪಾಲು ಗ್ರಾಮಸ್ಥರು ಈ ಮೂಲಕ ನಮ್ಮ ಸಮಸ್ಯೆಗೆ ಪರಿಹಾರ ಮಾಡುವ ಬದಲು ನಿಮ್ಮಲ್ಲಿ‌ ಒಗ್ಗಟಿಲ್ಲ ಅನ್ನುವ ವೇದವಾಕ್ಯ ಮುಂದಿಟ್ಟು ನಮ್ಮ ಸಮಸ್ಯೆಯನ್ನು ಕಡೆಗಣಿಸಲಾಗಿದೆ ಎಂದು ಪ್ರಕಟಣೆ ಹೊರಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು