Saturday, November 23, 2024
ಉಡುಪಿ

50 ಲಕ್ಷ ರೂ. ಗೆದ್ದ ಉಡುಪಿ ವಿದ್ಯಾರ್ಥಿ – ಕಹಳೆ ನ್ಯೂಸ್

ಉಡುಪಿ: ಅಮಿತಾಭ್ ಬಚ್ಚನ್ ನಡೆಸಿಗೊಡುವ ‘ಕೌನ್ ಬನೇಗಾ ಕರೋಡ್​ಪತಿ- ಸ್ಟೂಡೆಂಟ್ ವೀಕ್ ಸ್ಪೆಷಲ್’ನ ಗೇಮ್ ಶೋದಲ್ಲಿ ನಗರದ ವಿದ್ಯೋದಯ ಪಬ್ಲಿಕ್ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಅನಮಯ ಯೋಗೇಶ್ ದಿವಾಕರ್ 50 ಲಕ್ಷ ರೂ. ಬಹುಮಾನ ಗೆದ್ದಿದ್ದಾನೆ.

ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ವೇದಾಂತು ಆನ್​ಲೈನ್ ಲರ್ನಿಂಗ್ ಆಪ್​ನಲ್ಲಿ ಅ.5ರಿಂದ 25ರವರೆಗೆ ಆನ್​ಲೈನ್ ಕ್ವಿಜ್ ಆಯೋಜಿಸಲಾಗಿತ್ತು. ದೇಶದಾದ್ಯಂತ ಸುಮಾರು 1.5 ಲಕ್ಷ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಾವಿರ ವಿದ್ಯಾರ್ಥಿಗಳು ಪ್ರಥಮ ಹಂತದಲ್ಲಿ ಆಯ್ಕೆಯಾಗಿದ್ದು, ಇದರಲ್ಲಿ ಅತಿಹೆಚ್ಚು ಅಂಕ ಪಡೆದ 200 ವಿದ್ಯಾರ್ಥಿಗಳಿಗೆ ಸಂದರ್ಶನ ನಡೆದಿತ್ತು. ಅಂತಿಮ ಸುತ್ತಿನ ಸ್ಪರ್ಧೆಗೆ ದೇಶಾದ್ಯಂತ 8 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಅನಮಯ ಸಹ ಅವಕಾಶ ಪಡೆದಿದ್ದ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೂರನೇ ಸ್ಪರ್ಧಿಯಾಗಿ ಸ್ಪರ್ಧೆಗಿಳಿದ್ದ ಅನಮಯ 14 ಪ್ರಶ್ನೆಗಳಿಗೆ ಸರಿ ಉತ್ತರ ನೀಡಿದ್ದು, 15ನೇ ಪ್ರಶ್ನೆಗೆ ಉತ್ತರಿಸುವ ಆಯ್ಕೆಯಿಂದ ಹಿಂದಕ್ಕೆ ಸರಿದು 50 ಲಕ್ಷ ಬಹುಮಾನ ತನ್ನದಾಗಿಸಿಕೊಂಡಿದ್ದಾರೆ. ಸೋನಿ ವಾಹಿನಿಯಲ್ಲಿ ಡಿ.14ರಿಂದ 16ರವರೆಗೆ ಕ್ವಿಜ್ ಪ್ರಸಾರವಾಗಿದೆ. ಬಹಳ ಇಷ್ಟಪಟ್ಟು ಕಾರ್ಯಕ್ರಮದಲ್ಲಿ ಅನಮಯ ಭಾಗವಹಿಸಿದ್ದ. 15ನೇ ಪ್ರಶ್ನೆ 1 ಕೋಟಿ ರೂ. ಮೊತ್ತದ್ದಾಗಿತ್ತು. ಆದರೆ 14 ಪ್ರಶ್ನೆಗಳಿಗೆ ಉತ್ತರ ನೀಡಿ ಗರಿಷ್ಠ ಬಹುಮಾನ ಪಡೆದಿರುವುದು ಸಂತಸ ತಂದಿದೆ. ತೆರಿಗೆ ಕಳೆದು ಉಳಿದ ಮೊತ್ತವನ್ನು ಮಗನ ಹೆಸರಿನಲ್ಲಿ ನಿಖರ ಠೇವಣಿ ಇಡಲಾಗುತ್ತದೆ. ಆತನಿಗೆ 18 ವರ್ಷ ತುಂಬಿದ ಮೇಲೆ ಈ ಹಣ ತೆಗೆಯಲು ಸಾಧ್ಯವಾಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು