Sunday, January 19, 2025
ರಾಜ್ಯಶಿಕ್ಷಣ

ಪಠ್ಯ ಪುಸ್ತಕದಲ್ಲಿ ಬ್ರಾಹ್ಮಣ ಸಮುದಾಯದ ಅವಹೇಳನ ಆರೋಪ : ಸಚಿವ ಸುರೇಶ್ ಕುಮಾರ್ ಹೇಳಿದ್ದೇನು? – ಕಹಳೆ ನ್ಯೂಸ್

ಬೆಂಗಳೂರು : ಆರನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ಕದಲ್ಲಿ ಬ್ರಾಹ್ಮಣ ಸಮುದಾಯದ ಕುರಿತು ಅವಹೇಳನ ಮಾಡಿರುವ ಪಾಠವೊಂದು ಪ್ರಕಟವಾಗಿರುವ ಸಂಬಂಧ ಬಹಳ ಚರ್ಚೆಯಲ್ಲಿದ್ದು, ಈ ಕುರಿತು ಸಚಿವ ಸುರೇಶ್ ಕುಮಾರ್ ಅವರು ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿರುವ ಸುರೇಶ್ ಕುಮಾರ್ ಬ್ರಾಹ್ಮಣ ಸಮುದಾಯದ ಕುರಿತು ಅವಹೇಳನ ಮಾಡುವ ಪಾಠ ವೊಂದು ಆರನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಪ್ರಕಟವಾಗಿರುವ ವಿಚಾರ ಇಂದು ಬಹಳ ಚರ್ಚೆಯಲ್ಲಿದೆ. ಸ್ವತಃ ಮಂತ್ರಾಲಯದ ಪೂಜ್ಯ ಸ್ವಾಮೀಜಿಗಳು ನನಗೆ ದೂರವಾಣಿಯ ಮೂಲಕ ಬ್ರಾಹ್ಮಣ ಸಮುದಾಯಯದ ಭಾವನೆಗಳನ್ನು ತಿಳಿಸಿದ್ದಾರೆ. ನಮ್ಮ ಸರ್ಕಾರ ಬಂದ ಮೇಲೆ ಯಾವುದೇ ಪಠ್ಯಪುಸ್ತಕ ಪರಿಷ್ಕರಣೆ ಆಗಿಲ್ಲ. ಅಥವಾ ಹೊಸ ಪಾಠ ಸೇರಿಲ್ಲ ಎಂಬುದನ್ನು ಸ್ಪಷ್ಟ ಮಾಡಲು ಇಚ್ಛಿಸುತ್ತೇನೆ ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು